ಮನುಕಲಕ್ಕೆ ದೇವರು ನೀಡಿದ ವರ "ವೈದ್ಯರು'

Doctor sare a gift from God to mankind
Published on

ವಿಜಯಪುರ:ಕಾಯಿಲೆ ಗುಣಪಡಿಸುವ ಜತೆಗೆ ನೋವುಗಳಿಂದ ಮುಕ್ತರನ್ನಾಗಿಸುವ ವೈದ್ಯರನ್ನು ಮನುಕುಲಕ್ಕೆ ದೇವರು ನೀಡಿದ ವರದಾನವಾಗಿದೆ ಎಂದು ಬಿಎಲ್​ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಹೇಳಿದರು.ನಗರದ ಬಿಎಲ್​ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿರಿಯ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವರು ಮಾನವನಿಗೆ ಆರೋಗ್ಯವೆಂಬ ಅಮೂಲ್ಯ ಸಂಪತ್ತು ನೀಡಿದ್ದಾನೆ. ಈ ಸಂಪತ್ತನ್ನು ಬಾಧಿಸುವ ರೋಗಗಳನ್ನು ಗುಣಪಡಿಸಲು ವೈದ್ಯರ ರೂಪದಲ್ಲಿ ವರವನ್ನೂ ಕೊಟ್ಟಿದ್ದಾನೆ. ಕರೊನಾ ಸಂಕಷ್ಟ ಸಂದರ್ಭದಲ್ಲಂತೂ ವೈದ್ಯರು ತಮ್ಮ ಕುಟುಂಬಗಳನ್ನೂ ಲೆಕ್ಕಿಸದೆ ರೋಗಿಗಳಿಗೆ ನೀಡಿರುವ ಸೇವೆ ಸದಾ ಸ್ಮರಣೀಯ ಎಂದರು.

ಬಿಎಲ್​ಡಿಇ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಇಂದು ಹೆಮ್ಮರವಾಗಿ ಬೆಳೆಯಲು ಸಂಸ್ಥೆ ಕಟ್ಟಿ ಬೆಳೆಸಿದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶ್ರೀಗಳು, ಬಂಗಾರಮ್ಮ ಸಜ್ಜನ, ಬಿ.ಎಂ. ಪಾಟೀಲ ಹಾಗೂ ಸಹೋದರ ಎಂ.ಬಿ.ಪಾಟೀಲರ ಮಾರ್ಗದರ್ಶನ ಮತ್ತು ಹಿಂದಿನ ಹಾಗೂ ಇಂದಿನ ವೈದ್ಯರ ಸೇವೆ ಪ್ರಮುಖವಾಗಿದೆ. ನುರಿತ ವೈದ್ಯರು ನೀಡುವ ಚಿಕಿತ್ಸೆಯಿಂದಾಗಿ ಬಸವನಾಡಿನ ಜನತೆ ದೂರದ ಊರುಗಳಿಗೆ ಅಲೆಯುವುದು ತಪ್ಪಿದೆ ಎಂದರು.

ಬಿಎಲ್​ಡಿಇ ಡೀಮ್ಡ್​ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡಿ, ಬಿಎಲ್​ಡಿಇ ಸಂಸ್ಥೆ ವ್ಯಾಪ್ತಿ ಈಗ ದೇಶಕ್ಕೆ ವಿಸ್ತರಿಸಿದೆ. ಸಂಸ್ಥೆ ಅಧ್ಯ ಎಂ.ಬಿ. ಪಾಟೀಲ, ಡೀಮ್ಡ್​ ವಿವಿ ಕುಲಾಧಿಪತಿ ಬಿ.ಎಂ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅವರ ದೂರದೃಷ್ಠಿತ್ವದ ಫಲವಾಗಿ ಉತ್ತರೋತ್ತರವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ವೈದ್ಯರು ಮತ್ತು ಪ್ರಾಧ್ಯಾಪಕರಾದ ಆರ್​.ಸಿ. ಬಿದರಿ, ತೇಜಶ್ವಿನಿ ವಲ್ಲಭ, ಎಸ್​.ಎಸ್​. ದೇವರಮನಿ, ವಿಜಯಕುಮರ ಕಲ್ಯಾಣಪ್ಪಗೋಳ, ಶೈಲಜಾ ಬಿದರಿ, ಎಸ್​.ಎನ್​. ಬೆಂತೂರ, ಎಸ್​.ಆರ್​. ಮುದನೂರ, ಎಂ.ಎಸ್​. ಮೂಲಿಮನಿ, ಕುಸಾಲ ದಾಸ, ವಲ್ಲಭ, ಎಸ್​.ಪಿ. ಚೌಕಿಮಠ, ಅಶೋಕ ನಾಯಕ ಅವರನ್ನು ಸನ್ಮಾನಿಸಲಾಯಿತು.

ಆಸ್ಪತ್ರೆಯ ವೈದ್ಯಕಿಯ ಅಧೀಕ ರಾಜೇಶ ಹೊನ್ನುಟಗಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಅಶೋಕ ಪಾಟೀಲ, ಕಾನೂನು ಕಾಲೇಜಿನ ಪ್ರಾಚಾರ್ಯ ರುವೀರ ಕುಲಕರ್ಣಿ ಮತ್ತಿತರರಿದ್ದರು.ಡೀಮ್ಡ್​ ವಿವಿ ಕುಲಪತಿ ಡಾ. ಅರುಣ ಚಂ. ಇನಾಮದಾರ ಸ್ವಾಗತಿಸಿದರು. ಉದಯಕುಮಾರ ನುಚ್ಚಿ ಪರಿಚಯಿಸಿದರು. ತನುಜಾ ಪಠನಕರ, ಲತಾ ಮುಲ್ಲೂರ, ಚಂದ್ರಿಕಾ ದೂಡಿಹಾಳ, ಶ್ರೀಲಕ್ಷಿ$್ಮ ಬಗಲಿ, ಅಶ್ವಿನಿ ನುಚ್ಚಿ ನಿರೂಪಿಸಿದರು. ಗಿರೀಶ ಕುಲ್ಲೊಳ್ಳಿ ವಂದಿಸಿದರು.

ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಮೆಡಿಕಲ್​ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸುನೀಲಗೌಡ ಪಾಟೀಲ ಮಾತನಾಡಿದರು. ಡಾ. ವೈ.ಎಂ. ಜಯರಾಜ, ಡಾ. ಅರುಣ ಇನಾಮದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net