

ಅಂಕಲಗಿ: ಅಮರಸಿದ್ಧೇಶ್ವರ ಶ್ರೀಗಳು ಸಂಸ್ಕೃತ ದಶೋಪನಿಷತ್ ಮತ್ತು ದಶಶರಣರ ದೃಷ್ಟಿಯಲ್ಲಿ ಈಶ್ವರ ಸ್ವರೂಪ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಸಂಪಾದಿಸಿದ್ದು ನಮ್ಮ ನಾಡಿನ ಹೆಮ್ಮೆ. ಅವರು ಕೊಹಿನೂರ ವಜ್ರವಿದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸ್ಥಳೀಯ ಅಡವಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಮಠದ ಅಧ್ಯಕ್ಷ ಅಮರಸಿದ್ಧೇಶ್ವರ ಸ್ವಾಮೀಜಿ ಸಂಸ್ಕೃತ ದಶೋಪನಿಷತ್, ದಶ ಶರಣರ ದೃಷ್ಟಿಯಲ್ಲಿ ಈಶ್ವರ ಸ್ವರೂಪ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪಡೆದ ನಿಮಿತ್ತ ಮಠದ ಭಕ್ತರಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಬಂಧ ಬಿಡುಗಡೆಗೊಳಿಸಿ ಮಾತನಾಡಿದರು.
ಡಾ.ಅಮರಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಸಕಲ ಭಕ್ತರ ಆಶಯದಂತೆ ಮುನ್ನಡೆಯುವೆ. ಮಠದ ಅಭಿವೃದ್ಧಿಯೊಂದೆ ನನ್ನ ಪ್ರಮುಖ ಧ್ಯೇಯ ಎಂದರು.
ಮಮದಾಪುರ ಚರಮೂರ್ತೇಶ್ವರ ಸ್ವಾಮೀಜಿ ಮಾತನಾಡಿದರು. ಮುರಗೋಡ ನೀಲಕಂಠ ಸ್ವಾಮೀಜಿ, ಮುನವಳ್ಳಿ ಮುರುಘರಾಜೇಂದ್ರ ಸ್ವಾಮೀಜಿ, ಕಮತಗಿ-ಕೋಟೆಕಲ್ ಹುಚ್ಚೇಶ್ವರ ಸ್ವಾಮೀಜಿ, ಹುಕ್ಕೇರಿ ಶಿವಬಸವ ಸ್ವಾಮೀಜಿ, ಬೆಳಗಾವಿ ಗುರುಸಿದ್ಧ ಸ್ವಾಮೀಜಿ, ನವಲಕಲ್ ಸೋಮನಾಥ ಶಿವಾಚಾರ್ಯರು, ಅರಳಿಕಟ್ಟಿ ಶಿವಮೂರ್ತಿ ಸ್ವಾಮೀಜಿ, ಗುರುದೇವ
ದೇವರು ಪ್ರಭುಲಿಂಗೇಶ್ವರ ಮಠ ಕಮತೇನಟ್ಟಿ, ಪಾಶ್ಚಾಪುರ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ, ವೇದಮೂರ್ತಿ ಡಾ ಮಹಾಂತೇಶ ಶಾಸೀಗಳು, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಧುರೀಣರಾದ ಅಶೋಕ ಪೂಜಾರಿ, ಪಥ್ವಿರಾಜ್ ಕತ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಭರತ್ ಈಟಿ, ಸಂತೋಷ ವಕ್ರಾಣಿ, ಬ್ರಿಜೇಶ ಪಾಟೀಲ ಅಪಾರ ಭಕ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.