

ಮಡಿಕೇರಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಆಫ್ ಸಿವಿಲ್ ಇಂಜಿನಿಯರಿಂಗ್ ಸೈನ್ಸ್ ವಿಷಯದಲ್ಲಿ ಜಿಲ್ಲೆಯ ಸೋಮವಾರಪೇಟೆ ನಿವಾಸಿ ಕೆ.ಪಿ.ಸಾಹುಲ್ ಹಮೀದ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಸೋಮವಾರಪೇಟೆಯ ದಿ.ಕೆ.ಪಿ.ಅಬ್ದುಲ್ ರಹ್ಮಾನ್ ಮತ್ತು ಬಿಫಾತಿಮಾ ದಂಪತಿ ಪುತ್ರ ಸಾಹುಲ್ ಹಮೀದ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೋಮವಾರಪೇಟೆಯ ಓ.ಎಲ್.ವಿ. ಕಾನ್ವೆಂಟ್‌ನಲ್ಲಿ, ಪ್ರೌಢಶಾಲೆಯನ್ನು ಸೆಂಟ್ ಜೋಸೆಫ್ ಪ್ರೌಢಶಾಲೆ ಪೂರೈಸಿದ್ದಾರೆ. ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ಮುಗಿಸಿ, ಮೈಸೂರಿನ ಜೆ.ಸಿ.ಇ.ಕಾಲೇಜಿನಲ್ಲಿ ಪದವಿ ಪಡೆದರು.
ಬಳಿಕ ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಸಾಹುಲ್ ಎನ್ವಿರಾನ್ಮೆಂಟ್ ಇಂಜಿನಿಯರಿಂಗ್ ವಿಷಯದಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ.
ಕಳೆದ 3 ವರ್ಷದಿಂದ ಪ್ರೊ.ಬಿ.ಎಂ.ಸದಾಶಿವ ಮೂರ್ತಿ ಅವರ ಮಾರ್ಗದರ್ಶನದಲ್ಲಿ ’ಊಠಿಛಿ ಚ್ಞ ಠ್ಟಿಚ್ಞಟ್ಟಠಿ ಟ್ಛ ಛ್ಝಿಛ್ಚಿಠಿ ್ಖಇಖ ಜ್ಟಟ್ಠಜ ಈಜ್ಛ್ಛಿಛ್ಟಿಛ್ಞಿಠಿ ಠ್ಠಚಿಟಜ್ಝಿ ಚ್ಞ ಜ್ಟಟ್ಠ್ಞ ಡಿಠಿಛ್ಟಿ‘ ವಿಷಯದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಥೀಸಿಸ್‌ಗೆ ಡಾಕ್ಟರೇಟ್ ಪದವಿ ಲಭಿಸಿದೆ.