

ಕಡಬ: ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಕಂಪ್ಯೂಟರ್ ಸೈನ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ತನುಜ ಕಾಯರ್ಗ ಮಂಡಿಸಿದ ಮಹಾಪ್ರಬಂಧಕ್ಕೆ ತಮಿಳುನಾಡಿನ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಡಾಕ್ಟರೇಟ್ ಪದವಿ ನೀಡಿದೆ.
ವಿಐಟಿಯ ಡಾ.ಎಸ್.ಆನಂದ್ ಕುಮಾರ್ ಮಾರ್ಗದರ್ಶನದಲ್ಲಿ ಈ ಪ್ರಬಂಧ ಸಿದ್ಧಪಡಿಸಿದ್ದಾರೆ. ಆಗಸ್ಟ್ ಎರಡರಂದು ವಿಐಟಿ ಕ್ಯಾಂಪಸ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುದ್ದೆ ಸಮ್ಮುಖದಲ್ಲಿ ವಿವಿ ಕುಲಾಧಿಪತಿ ಜಿ.ವಿಶ್ವನಾಥನ್ ಪದವಿ ಪ್ರದಾನ ಮಾಡಿದರು.
ಸವಣೂರು ಗ್ರಾಮದ ಕಾಯರ್ಗ ನಿವಾಸಿ ಪತ್ರಕರ್ತ ಲೋಕೇಶ್ ಕಾಯರ್ಗ ಪತ್ನಿಯಾಗಿರುವ ಡಾ.ತನುಜ ಪ್ರಸ್ತುತ ಮೈಸೂರು ನಿವಾಸಿಯಾಗಿದ್ದು, ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಕಂಬಳ ಮನೆಯ ದಿ.ದುಷ್ಯಂತ ಮತ್ತು ಗುಲಾಬಿ ದಂಪತಿ ಪುತ್ರಿ.