ಪಂಚಾಂಗ ಕರ್ತರಿಗೆ ಡಾಕ್ಟರೇಟ್ ಗೌರವ

28gkn1- doctarate
Published on

ಗೋಕರ್ಣ: ಖ್ಯಾತ ಬಗ್ಗೋಣ ಪಂಚಾಂಗ ಸಂಪಾದಕ ಮತ್ತು ಹಿರಿಯ ಜ್ಯೋತಿಷಿ ಇಲ್ಲಿನ ವೆಂಕಟ್ರಮಣ ವಿಘ್ನೕಶ್ವರ ಪಂಡಿತ ಅವರು ಜೋತಿಷ ಶಾಸ್ತ್ರದಲ್ಲಿ ಪಡೆದಿರುವ ಪಾಂಡಿತ್ಯವನ್ನು ಗೌರವಿಸಿ ಅಮೆರಿಕಾದ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಕೌನ್ಸಿಲ್ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.


ಇತ್ತೀಚೆಗೆ ಗೋವಾದ ಪಣಜಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ರಾಯಭಾರಿ ಡಾ. ಮಹೇಶ ಗೌಡ, ರಾಷ್ಟ್ರೀಯ ಜಾನಪದ ಗಾಯಕಿ ಡಾ. ಬಿ. ಪದ್ಮಾವತಿ, ಗೋವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net