ಮರ ಉರುಳಿ ನಜ್ಜುಗುಜ್ಜಾದ ಕಾರು, ವೈದ್ಯ ಪವಾಡಸದೃಶ ಪಾರು

ಮರ ಉರುಳಿ ವೈದ್ಯ ವಿಷ್ಣುಪ್ರಕಾಶ್ ಬರೆಕೆರೆ ಸಂಚರಿಸುತ್ತಿದ್ದ ಕಾರು ಜಖಂಗೊಂಡಿರುವುದು.
ಮರ ಉರುಳಿ ವೈದ್ಯ ವಿಷ್ಣುಪ್ರಕಾಶ್ ಬರೆಕೆರೆ ಸಂಚರಿಸುತ್ತಿದ್ದ ಕಾರು ಜಖಂಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಾಸರಗೋಡಿನಲ್ಲಿ ಬೇಸಿಗೆ ಮಳೆ
  • ಸಿಡಿಲು, ಗಾಳಿಗೆ ವ್ಯಾಪಕ ಹಾನಿ

ವಿಜಯವಾಣಿ ಸುದ್ದಿಜಾಲಕಾಸರಗೋಡು

ಸಿಡಿಲು,ಗಾಳಿಯಿಂದಕೂಡಿದ ಬೇಸಿಗೆ ಮಳೆಗೆ ಕಾಸರಗೋಡುಜಿಲ್ಲಾದ್ಯಂತ ವ್ಯಾಪಕ ನಾಶ,ನಷ್ಟ ಸಂಭವಿಸಿದೆ.ಮಂಗಳವಾರರಾತ್ರಿ ಬಿರುಸಿನ ಗಾಳಿ,ಸುರಿದ ಮಳೆಗೆಮಣಿಯಂಪಾರೆ ಸನಿಹ ಸಂಚರಿಸುತ್ತಿದ್ದಕಾರಿನ ಮೇಲೆ ಮರ ಉರುಳಿ ಕಾರಲ್ಲಿದ್ದವೈದ್ಯ ವಿಷ್ಣು ಪ್ರಕಾಶ್ ಬರೆಕೆರೆಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.ಕಾರು ಸಂಪೂರ್ಣನಜ್ಜುಗುಜ್ಜಾಗಿದೆ.

ಸೀತಾಂಗೋಳಿಯಲ್ಲಿಕ್ಲಿನಿಕ್ ನಡೆಸುತ್ತಿರುವಡಾ.ವಿಷ್ಣುಪ್ರಸಾದ್ ಬರೆಕೆರೆ ಕ್ಲಿನಿಕ್‌ನಿಂದಮನೆಗೆ ತೆರಳುವ ಮಧ್ಯೆ ಘಟನೆಸಂಭವಿಸಿದೆ.ವಿದ್ಯುತ್ಕಂಬ, ತಂತಿ,ಮರದ ರೆಂಬೆಜತೆಯಾಗಿ ಕುಸಿದು ಕಾರಿನ ಮೇಲೆಕುಸಿದಿದೆ.ತಕ್ಷಣಆಸುಪಾಸಿನ ಜನರು ಕಾರಿನಿಂದವೈದ್ಯರನ್ನು ಸುರಕ್ಷಿತವಾಗಿಹೊರಕ್ಕೆ ಕರೆತಂದಿದ್ದಾರೆ.ಪ್ರದೇಶದಲ್ಲಿತಾಸುಗಳ ಕಾಲ ವಿದ್ಯುತ್ ಸಂಪರ್ಕಅಸ್ತವ್ಯಸ್ತಗೊಂಡಿತ್ತು.

ಉಪ್ಪಳದಲ್ಲಿಮನೆಗಳಿಗೆ ಹಾನಿ

ಗುಡುಗು,ಮಿಂಚು ಸಹಿತಮಳೆಯ ಪರಿಣಾಮ ಉಪ್ಪಳದಲ್ಲಿ ಹಲವುಮನೆಗಳಿಗೆ ಹಾನಿಯುಂಟಾಗಿದೆ.ಸಿಡಿಲಿನಆಘಾತದಿಂದ ಮಂಗಲ್ಪಾಡಿ ಕೃಷ್ಣನಗರನಿವಾಸಿ ಭಾಸ್ಕರ ಕೊಂಕಣಿಯೂರುಎಂಬುವರ ಮನೆಯ ಮೇಲಿನ ಮಹಡಿಯಲ್ಲಿಗೋಡೆ ಬಿರುಕು ಬಿಟ್ಟು ವಿವಿಧಗೃಹೋಪಕರಣಗಳಿಗೆ ಹಾನಿಯುಂಟಾಗಿದ್ದು,ಮನೆಯ ವಯರಿಂಗ್ಕೂಡಾ ನಾಶವಾಗಿದೆ.ಇದೇಕಾಂಪೌಂಡ್‌ನಲ್ಲಿರುವ ಇವರಸಹೋದರರಾದ ಪ್ರಭಾಕರ,ಸುಕುಮಾರ,ಮಾಧವ ಎಂಬುವರಮನೆಯ ವಿದ್ಯುತ್ ಉಪಕರಣಗಳುಹಾನಿಗೀಡಾಗಿವೆ.

ಕಾಸರಗೋಡಿನಲ್ಲಿಮನೆಗಳಿಗೆ ಹಾನಿ

ಸಿಡಿಲಿನಆಘಾತದಿಂದ ಕಾಸರಗೋಡು ಕಸಬಾಕಡಪ್ಪುರ ನಿವಾಸಿ ಮೀನಾಕ್ಷಿಎಂಬುವರ ಹೆಂಚು ಹಾಸಿದ ಮನೆಹಾನಿಗೀಡಾಗಿದೆ.ಮನೆಯೊಳಗಿನಫ್ರಿಡ್ಜ್‌ನಿಂದ ಮೊದಲು ಬೆಂಕಿಕಾಣಿಸಿಕೊಂಡಿದ್ದು,ಆನಂತರ ಟಿವಿ,ಫ್ಯಾನ್,ಹಾಸಿಗೆ,ಬಟ್ಟೆಬರೆಗಳಿಗೂಬೆಂಕಿ ವ್ಯಾಪಿಸಿದೆ.ಮೀನಾಕ್ಷಿಮನೆಯಿಂದ ಹೊರಕ್ಕೆ ಧಾವಿಸಿದಹಿನ್ನೆಲೆಯಲ್ಲಿ ಪ್ರಾಣಾಪಾಯತಪ್ಪಿದೆ.

ಮಾಹಿತಿ ಪಡೆದಅಗ್ನಿಶಾಮಕ ದಳ ಸಿಬ್ಬಂದಿಸ್ಥಳಕ್ಕಾಗಮಿಸಿ ಬೆಂಕಿ ಶಮನಗೊಳಿಸುವಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net