

ಹಿರೇಬಾಗೇವಾಡಿ: ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸಿ ವತ್ತಿಗೆ ಗೌರವ ತರುವ ಕೆಲಸ ಮಾಡಬೇಕಿದೆ ಎಂದು ಬೆಳಗಾವಿ ಪ್ರಭಾ ಹಾಸ್ಪಿಟಲ್ ವೈದ್ಯ ಡಾ. ವಿಜಯ ದೇಸಾಯಿ ಹೇಳಿದರು.
ಪಟ್ಟಣದ ಸಾಯಿ ಮಂದಿರಲ್ಲಿ ಶ್ರೀಸಾಯಿ ಸೇವಾ ಸಮಿತಿ ಹಾಗೂ ಸೇವಾ ನಿರತ ವೆದ್ಯರ ಬಳಗದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯರನ್ನು ದೇವರ ಸಮನಾಗಿ ಕಾಣುವುದರಿಂದ ಆ ನಂಬಿಕೆ ಉಳಿಸಿಕೊಳ್ಳಬೇಕು ಎಂದರು.ಸಾಯಿ ಸೇವಾ ಸಮಿತಿ ಅಧ್ಯ ಡಾ. ಎ್.ಎಸ್. ಪಾಟೀಲ ಮಾತನಾಡಿ, ವೈದ್ಯ ವೃತ್ತಿಗೆ ಸಮಾಜದಲ್ಲಿ ಅತ್ಯಂತ ಗೌರವವಿದ್ದು, ಎಲ್ಲರ ವಿಶ್ವಾಸ ಗಳಿಸಬೇಕಿದೆ ಎಂದರು.ಡಾ. ವಿಜಯ ದೇಸಾಯಿ ಅವರಿಗೆ ಸಾಯಿ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗ್ರಾಪಂ ಅಧ್ಯೆ ಜಯಶ್ರೀ ಜಪ್ತಿ ಅಧ್ಯತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ ಮಾಧುಭರಮಣ್ಣವರ, ಬ್ಲಾಕ್ ಕಾಂಗ್ರೆಸ್ ಅಧ್ಯ ಸಿ.ಸಿ. ಪಾಟೀಲ, ವೈದ್ಯರಾದ ಎಸ್.ಎಸ್. ಪಾಟೀಲ, ವಿರೂಪಾ ಓಂಕಾರಿ, ಸುರೇಶ ಯಳ್ಳೂರ, ಕೆ.ಎಸ್. ಗವಿಮಠ, ವಿಶ್ವನಾಥ ಯಳ್ಳೂರ, ನಿವೃತ್ತ ಶಿಕರಾದ ವಾರವಾಡಿ, ಎಸ್.ಎಸ್. ಅರಳಿಕಟ್ಟಿ ಇತರರು ಇದ್ದರು.