ಕೆರೆಗೆ ಬಿದ್ದು ಯುವ ವೈದ್ಯ ಮೃತ್ಯು

death
Published on

ಕುಂದಾಪುರ: ಕೋಟೇಶ್ವರದಲ್ಲಿ ಬುಧವಾರ ಸಂಜೆ ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ಯುವ ವೈದ್ಯ, ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಗೌರೀಶ್ ಬಿ.ಆರ್. (25) ಮೃತಪಟ್ಟಿದ್ದಾರೆ. ಅವರು ಎಂಬಿಬಿಎಸ್ ವಿದ್ಯಾಭ್ಯಾಸ ಮುಗಿಸಿ ಮುಂದಿನ ವಿದ್ಯಾಬ್ಯಾಸಕ್ಕಾಗಿ ಮನೆಯಲ್ಲಿದ್ದು, ಬುಧವಾರ ಸಂಜೆ ಮನೆ ಬಳಿಯಿರುವ ಇರುವ ಈಜು ಕೊಳದಲ್ಲಿ ಈಜಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು, ರಾತ್ರಿಯಾದರು ಮನೆಗೆ ಬಂದಿರಲಿಲ್ಲ. ರಾತ್ರಿ ಗೌರೀಶ ಅವರ ಮೊಬೈಲ್, ಬ್ಯಾಗ್ ಹಾಗೂ ಚಪ್ಪಲಿ ಕೋಟೇಶ್ವರದ ಕೋಟೀಲಿಂಗೇಶ್ವರ ಕೆರೆಯ ಸಮೀಪ ಪತ್ತೆಯಾಗಿತ್ತು. ಗುರುವಾರ ಬೆಳಗ್ಗೆ ಕೋಟೇಶ್ವರ ಕೋಟೀಲಿಂಗೇಶ್ವರ ಕೆರೆಯಲ್ಲಿ ಗೌರೀಶ ಮೃತದೇಹ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ಕೋಟೇಶ್ವರ ಕೋಟೀಲಿಂಗೇಶ್ವರ ಕೆರೆಯ ಬಳಿ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದೆಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net