ಶಸ್ತ್ರಚಿಕಿತ್ಸೆ ಬಳಿಕ ರೋಗಿಯನ್ನು ಡಿಸ್​ಚಾರ್ಜ್​ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ ಎಸಿಬಿ ಬಲೆಗೆ

Doctor 31 Dec 19
Published on

ರಾಮನಗರ: ಇಲ್ಲಿನ ಜಿಲ್ಲಾಸ್ಪತ್ರೆ ವೈದ್ಯ ರೋಗಿಯೋರ್ವರನ್ನು ಡಿಸ್​ಚಾರ್ಜ್​ ಮಾಡಲು ಹಣಕ್ಕೆ ಬೇಡಿಕೆ ಇಟ್ಟು ಈಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ವೈದ್ಯ ನಾರಾಯಣಸ್ವಾಮಿ, ರೋಗಿಯೋರ್ವರಿಗೆ ಅಪೆಂಡಿಕ್ಸ್​ ಶಸ್ತ್ರಚಿಕಿತ್ಸೆ ಮಾಡಿದ್ದರು. ಬಳಿಕ ಅವರನ್ನು ಡಿಸ್​ಚಾರ್ಜ್ ಮಾಡಲು 10,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಮುಂಚಿತವಾಗಿ ಏಳು ಸಾವಿರ ರೂಪಾಯಿ ಪಡೆದಿದ್ದರು.

ಮತ್ತೆ 10 ಸಾವಿರ ರೂಪಾಯಿ ಪಡೆಯುತ್ತಿದ್ದ ವೇಳೆ ರಾಮನಗರ ಎಸಿಬಿ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ದಾಳಿ ನಡೆಸಿ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net