ರೋಗಿಗಳಿಗೆ ವೈದ್ಯರೇ ಭರವಸೆ: ನಾಲ್ವಡಿ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಹನುಮಂತಯ್ಯ ಅಭಿಮತ

1 (5)
Published on

ಮಂಡ್ಯ: ರೋಗಿಯ ಜೀವ ಉಳಿಸುವ ಕರ್ತವ್ಯದೊಂದಿಗೆ ವೈದ್ಯರು ಬದುಕಿನ ಭರವಸೆಯಾಗಿದ್ದಾರೆ ಎಂದು ನಾಲ್ವಡಿ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಹನುಮಂತಯ್ಯ ಹೇಳಿದರು.

ಇಲ್ಲಿನ ವಿದ್ಯಾನಗರದ ಕರುನಾಡ ಕೇಬಲ್ ಲಿಂಕ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಒಕ್ಕೂಟ ಜಿಲ್ಲೆ 317ಜಿ ನಾಲ್ವಡಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲೆಮರೆಕಾಯಿಯಂತೆ ರೋಗಿಗಳ ಸೇವೆ, ಆರೋಗ್ಯ, ಸಮಾಜದ ಸ್ವಾಸ್ಥ್ಯ ಸುಧಾರಣೆ ಮಾಡುವ ವೈದ್ಯರನ್ನು ಸಮಾಜ ಸ್ಮರಿಸಿಕೊಳ್ಳುತ್ತದೆ. ಇಂತಹ ಸೇವಾನಿರತ ವೈದ್ಯರನ್ನು ಗೌರವಿಸಿ ಬದುಕು ನೀಡಿದವರನ್ನು ಆರಾಧಿಸುವ ದಿನವಾಗಿದೆ ಎಂದು ನುಡಿದರು.

ಅಭಿನಂದನೆ ಸ್ವೀಕರಿಸಿದ ವೈದ್ಯ ಡಾ.ಎಂ.ಮಾದೇಶ್ ಮಾತನಾಡಿ, ವೈದ್ಯರ ದಿನಾಚಣೆಯಲ್ಲಿ ಗೌರವಿಸಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತಷ್ಟು ಸಮಾಜಮುಖಿಯಾಗಿ ದುಡಿಯಲು, ರೋಗಿಗಳ ಆರೋಗ್ಯ ರಕ್ಷಣೆ ಸುಧಾರಿಸಲು ಪ್ರೇರಣೆಯಾಗಿದೆ ಎಂದು ನುಡಿದರು.

ಸಂಸ್ಥೆಯ ಅಧ್ಯಕ್ಷ ಕೆ.ಶಿವಲಿಂಗಯ್ಯ, ಪ್ರಾಂತೀಯ ಅಧ್ಯಕ್ಷ ಎಂ.ಆರ್.ಮಂಜು, ವಲಯಾಧ್ಯಕ್ಷ ಧನಂಜಯ ದಸರಗುಪ್ಪೆ, ಚಂದ್ರಲಿಂಗು, ಸುಭಾಷ್, ಲಿಂಗೇಗೌಡ, ಶಿವಣ್ಣ, ಶಿವಲಿಂಗೇಗೌಡ, ಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net