ವೈದ್ಯರಿಂದ ಹಲ್ಲೆ ರೋಗಿ ಆರೋಪ

Crime Logo
Published on

ಮಂಗಳೂರು: ಚಿಕಿತ್ಸೆಗೆಂದು ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದಾಗ ಕರ್ತವ್ಯದಲ್ಲಿದ್ದ ವೈದ್ಯರು ಸ್ಪಂದಿಸದೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಯೆಯ್ಯಡಿಯ ವಸಂತಿ ಎಂಬುವರನ್ನು ಅಪೆಂಡಿಕ್ಸ್ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ ಬಳಿಕ ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಅವರ ಮಕ್ಕಳು ಮಂಗಳವಾರ ಮತ್ತೆ ಆಸ್ಪತ್ರೆಗೆ ಕರೆ ತಂದು ವೈದ್ಯರಿಗೆ ತೋರಿಸಿದ್ದಾರೆ. ಈ ಸಂದರ್ಭ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು ಇರಲಿಲ್ಲ. ಡ್ಯೂಟಿ ಡಾಕ್ಟರೊಬ್ಬರು ಊಟ ಮಾಡಲು ಕಷ್ಟವಾಗುವುದಾದರೆ ಟ್ಯೂಬ್ ಮೂಲಕ ಜ್ಯೂಸ್ ನೀಡಿ ಎಂದು ಹೇಳಿ ಬಾಯಿಗೆ ಟ್ಯೂಬ್ ಹಾಕಿದ್ದಾರೆ. ಇದಕ್ಕೆ ವಸಂತಿ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ಸಿಟ್ಟಿಗೆದ್ದ ವೈದ್ಯರು ಹಲ್ಲೆ ನಡೆಸಿದ್ದಾರೆ ಎನ್ನುವುದು ಆರೋಪ.

ವೈದ್ಯರು ಹಲ್ಲೆ ನಡೆಸಿಲ್ಲವೆಂದು ವೆನ್ಲಾಕ್ ಡಿಎಂಒ ಡಾ.ಸದಾಶಿವ ಸ್ಪಷ್ಟಪಡಿಸಿದ್ದಾರೆ. ಟ್ಯೂಬ್ ಹಾಕುವಾಗ ಮಹಿಳೆ ಒದ್ದಾಡಿದ್ದು, ಈ ಸಂದರ್ಭ ವೈದ್ಯರು ಸಮಾಧಾನ ಪಡಿಸಿದ್ದಾರೆ. ವೈದ್ಯರು ರೋಗಿಗಳನ್ನು ಉಪಚರಿಸುತ್ತಾರೆಯೇ ಹೊರತು ಹಲ್ಲೆ ನಡೆಸುವುದಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net