

ರಾಣೆಬೆನ್ನೂರ: ಮುಸ್ಲಿಂ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 11 ಜನ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿಯ ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವದ ತಂಡ ಯಶಸ್ವಿಯಾಗಿದೆ.
ನಗರದ ಮಕ್ಸೂದ್ ಖಲೀಲಅಹ್ಮದ್ ಮೊಮೀನ್ (35), ಸೈಯದ್ಅಹ್ಮದ್ ಸೈಯದ್ಗೌಸಪೀರ ಮಕಾಂದರ (42), ಸಾಯಿದಖಾನ ಖರೀಮಖಾನ ಹೊನ್ನಾಳಿ (28), ಜಾರಸಾಧೀಕ ಗುಲ್ಜರಸಾಬ ಕಿಲ್ಲೇದಾರ (40), ಅಬ್ದುಲ್ಮೊನಾ ಖಲೀಲಅಹ್ಮದ್ ಮೊಮೀನ್ (40), ಅಶ್ಫಕ ಶಂಶುದ್ಧಿನ ಮುಲ್ಲಾ (33), ರಫೀಕ ಶಂಶುದ್ಧಿನ ಮುಲ್ಲಾ (25), ಅಬ್ದುಲಜಾರ ಜಮಾಲವುದ್ದಿನ ಹರಪನಹಳ್ಳಿ (35), ಮೋಹಿದಖಾಜಾ ರಫೀಕ್ ದಾವಣಗೆರೆ (37), ಮದ್ದಶಿರಾ ಮುಸ್ತಾ ಬಂಕಾಪುರ (22), ಅಸ್ಲಾಂಅಹ್ಮದ್ ಮುಸ್ತಾಕ ಅಹ್ಮದ್ ಧರಾಣಾ (29) ಸೇರಿ 11 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ಸೆ. 20ರಂದು ರಾತ್ರಿ ನಗರದ ವೈದ್ಯ ಡಾ. ಗುರುಮೂತಿರ್ಯ್ಯ ರಾಚೋಟಿಮಠ ಎಂಬುವರು ಮುಸ್ಲಿಂ ಸಮಾಜದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕ್ಲಿನಿಕ್ಗೆ ನುಗ್ಗಿ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಅಲ್ಲದೆ ಕ್ಲಿನಿಕ್ ಮುಂದಿದ್ದ ಬೈಕ್ಅನ್ನು ಎತ್ತಿ ಒಗೆದು ಜಖಂಗೊಳಿಸಿದ್ದರು.
ಈ ಕುರಿತು ವೈದ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ, ಎಸ್ಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.