ಬೈಲಕುಪ್ಪೆ: ಚಿಕಿತ್ಸೆಗೆಂದು ಪಡೆಯಲು ಹೋದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ ವೈದ್ಯನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೈಲಕುಪ್ಪೆ ಗ್ರಾಮದಲ್ಲಿರುವ ಡಾ.ಸಿ.ಎನ್.ರೆಡ್ಡಿ ಕ್ಲಿನಿಕ್‌ಗೆ ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆಗೆ ಹೋದಾಗ ನನಗೆ ವೈದ್ಯ ಡಾ.ಚಂದ್ರಸೇನಾ ರೆಡ್ಡಿ ತಪಾಸಣೆ ಮಾಡುವ ನೆಪದಲ್ಲಿ ಅಂಗಾಂಗವನ್ನು ಅಸಭ್ಯವಾಗಿ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ತಿರುಮಲಪುರ ಗ್ರಾಮದ ಮಹಿಳೆ ಬೈಲಕುಪ್ಪೆ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಅಜಯ್‌ಕುಮಾರ್ ಅವರು ಡಾ.ಚಂದ್ರಸೇನಾ ರೆಡ್ಡಿಯನ್ನು ಗುರುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಾ.ಚಂದ್ರಸೇನಾ ರೆಡ್ಡಿ