ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅಂಜುಮನ್ ವಿದ್ಯಾರ್ಥಿನಿಯರ ಅನುಪಮ ಸಾಧನೆ, ಏನದು ಗೊತ್ತಾ?

ANJUMAN STUDENT ACHIVE
ವಿಜಯಪುರ ನಗರದ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಾಧಕ ವಿದ್ಯಾರ್ಥಿನಿಯರಾದ ಬಿಬಿ ಆಯಿಶಾ ಇನಾಮದಾರ ಮತ್ತು ಸಯ್ಯಿದಾ ಉಮ್ಮೆಹಾನಿ ಇನಾಮದಾರ ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಡಾ. ಎಸ್.ಜೆ. ಜಹಾಗಿರದಾರ, ಡಾ. ಸಲೀಂ ದೇಸಾಯಿ, ಡಾ.ಸದ್ದಾಂಹುಸೇನ್ ಮುಜಾವರ ಇದ್ದಾರೆ.
Published on

ವಿಜಯಪುರ: ತ್ಯಾಜ್ಯದಿಂದ ಅತ್ಯುಪಯುಕ್ತ ವಸ್ತುಗಳ ರಚನೆಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅನುಪಮ ಸಾಧನೆ ಮೆರೆದಿದ್ದಾರೆ.

ವಿದ್ಯಾರ್ಥಿನಿಯರಾದ ಬಿಬಿ ಆಯಿಶಾ ಇನಾಮದಾರ ಮತ್ತು ಸಯ್ಯಿದಾ ಉಮ್ಮೆಹಾನಿ ಇನಾಮದಾರ ಇವರು ರಾಜ್ಯಮಟ್ಟದ ಸಾಧಕರು.

ಮಹಾತ್ಮ ಗಾಂಧಿ ಜಯಂತಿ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆ ವಿಜಯಪುರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಜೈನ್ ವಿವಿ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈ ವಿದ್ಯಾರ್ಥಿನಿಯರು ತ್ಯಾಜ್ಯ ವಸ್ತುಗಳಿಂದ ತಯಾರಿಸಲ್ಪಡುವ ಉಪಯುಕ್ತ ವಸ್ತುಗಳ ರಚನೆ ವಿಭಾಗದಲ್ಲಿ ಅನುಕ್ರಮವಾಗಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ಅಂಜುಮನ್ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆಯಲ್ಲದೇ ಸನ್ಮಾನಿಸಿ ಗೌರವಿಸಿದೆ. ಈ ಸಂದರ್ಭ ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪುರತತ್ವಾಧಿಕಾರಿ ಡಾ. ಮೂಲಿಮನಿ, ಆರ್‌ಸಿಯು ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಕನಕಪ್ಪ ಪೂಜಾರ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಜಾವೀದ್ ಜಮಾದಾರ್, ಗಂಗಾಧರ ಅಗಸರ, ರಾಜು ಕಪಾಲಿ, ಪ್ರಾಂಶುಪಾಲ ಡಾ. ಎಸ್.ಜೆ. ಜಹಾಗಿರದಾರ, ಡಾ. ಸಲೀಂ ದೇಸಾಯಿ, ಡಾ.ಸದ್ದಾಂಹುಸೇನ್ ಮುಜಾವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net