ನಂದಿ ಕಾರ್ಖಾನೆಯಲ್ಲಿ ಬಾಯ್ಲರ್ ಅಗ್ನಿ ಪ್ರದೀಪನ, ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಆಶೀರ್ವಚನೆ ಹೇಗಿತ್ತು ಗೊತ್ತಾ?

NANDI SHUGAR BOYLER PRADEEPANA
ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಅಗ್ನಿ ಪ್ರದೀಪನ ಹಾಗೂ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮ ನೆರವೇರಿತು. ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಅದೃಷ್ಟಪ್ಪ ದೇಸಾಯಿ, ಅಭಿನವ ಮುರುಗೇಂದ್ರ ಮಹಾಸ್ವಾಮೀಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಅಗ್ನಿ ಪ್ರದೀಪನ ಹಾಗೂ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮ ಗುರುವಾರ ನೆರವೇರಿತು.

ಸಾನ್ನಿಧ್ಯ ವಹಿಸಿದ್ದ ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ನಂದಿ ಕಾರ್ಖಾನೆ ರೈತರ ಜೀವನ ಶೈಲಿಯನ್ನು ಬದಲಾಯಿಸಿದೆ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಮ್ಮ ದೇಶದಲ್ಲಿ ಅನೇಕ ಸಹಕಾರಿ ಸಂಘಗಳಿಂದ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಕಷ್ಟದ ಕಾಲದಲ್ಲಿ ಉಪಯೋಗ ವಾಗುತ್ತಿದೆ. ಅದರಂತೆ ನಮ್ಮ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಈ ಭಾಗದ ಎಲ್ಲ ರೈತರ ಪಾಲಿಗೆ ಕಾಮಧೇನು-ಕಲ್ಪವೃಕ್ಷದಂತೆ ಎಂದರು.

ಮಮದಾಪುರದ ಅಭಿನವ ಮುರುಗೇಂದ್ರ ಮಹಾಸ್ವಾಮೀಜಿ ಮಾತನಾಡಿ, ಬರುವ ದಿನಗಳಲ್ಲಿ ಈ ಭಾಗದ ರೈತರು ತಮ್ಮ ಕಬ್ಬನ್ನು ಕಾರ್ಖಾನೆಗೆ ಕಳುಸಲು ಮನವಿ ಮಾಡಿಕೊಳ್ಳುತ್ತೇವೆ. ಕಾರ್ಖಾನೆ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ನಮ್ಮ ಭಾಗದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದರು.

ಅಧ್ಯಕ್ಷ ಕುಮಾರ್ ಚಂದ್ರಕಾಂತ್ ದೇಸಾಯಿ (ಜೈನಾಪುರ) ಮಾತನಾಡಿ, ರೈತರು ಹಾಗೂ ಶೇರು ಸದಸ್ಯರು ಕಾರ್ಖಾನೆ ಪ್ರಗತಿಗೆ ಶ್ರಮಿಸಬೇಕು ಎಂದರು.

ನಿರ್ದೇಶಕ ಅದೃಷ್ಟಪ್ಪ ದೇಸಾಯಿ ಮಾತನಾಡಿದರು. ಮರೆಗುದ್ದಿಯ ಪ್ರಭು ತೋಂಟದಾರ್ಯ ಸ್ವಾಮೀಜಿ, ಬೂದಿಹಾಳ ಎಸ್‌ಜಿಯ ಪ್ರಭು ಮಹಾಸ್ವಾಮೀಜಿ, ಜಂಬಗಿ ಹಾಗೂ ಕೆಂಗಲಗುತ್ತಿಯ ಅಡವಿ ಸಿದ್ಧೇಶ್ವರ ಶಿವಾಚಾರ್ಯರು, ಜತ್ತ ತಾಲೂಕಿನ ಸಂಖ ವಿರಕ್ತ ಮಠದ ಡಾ. ಮಹೇಶ್ ದೇವರು ಹಾಗೂ ಗುಣದಾಳದ ವಿವೇಕಾನಂದ ದೇವರು, ಬಬಲಾದಿಯ ಸಿದ್ದರಾಮಯ್ಯ ಹೊಳೆಮಠ, ಬಿದರಿಯ ಬಸಯ್ಯ ಹಿರೇಮಠ, ಬರಡೋಲದ ಮುತ್ತು ಹಿರೇಮಠ, ಕಣಬೂರದ ರಾಚಯ್ಯ ಸ್ವಾಮೀಜಿ, ಉಪಾಧ್ಯಕ್ಷ ಅಶೋಕ ಲಂಕಣ್ಣವರ, ನಿರ್ದೇಶಕರಾದ ಹನುಮಂತ ಶಂಕ್ರಪ್ಪ ಕೋರಡ್ಡಿ, ಈರಣಗೌಡ ಬಸನಗೌಡ ನ್ಯಾಮಗೌಡರ, ಜಿ.ಕೆ. ಕೊನಪ್ಪನವರ, ರಮೇಶ ಪಾಂಡಪ್ಪ ಜಕರೆಡ್ಡಿ, ಬಸನಗೌಡ ದುಂಡಪ್ಪಗೌಡ ಪಾಟೀಲ, ಸಂಜೆಯಗೌಡ ಗೌಡಪ್ಪಗೌಡ ಪಾಟೀಲ, ಸೋಮನಗೌಡ ರಾಮನಗೌಡ ಪಾಟೀಲ, ಗುರುಲಿಂಗಪ್ಪ ದುಂಡಪ್ಪ ಅಂಗಡಿ, ಶ್ರೀನಿವಾಸ ನಿಡೋಣಿ ಮತ್ತಿತರರಿದ್ದರು.

ಗಲಗಲಿಯ ರಾಮಾಚಾರಿ ಕಟ್ಟಿ ಹೋಮ-ಹವನ ನೆರವೇರಿಸಿದರು.

ಮಹೇಂದ್ರ ಕಾರ್ ನಿರ್ವಹಿಸಿದರು. ಬಿ.ಜಿ. ಬಿರಾದಾರ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net