ಚೈತ್ರಾ ಕುಂದಾಪುರನಿಂದ ಕೋಟಿ ರೂಪಾಯಿಗೆ ಬೇಡಿಕೆ, ಸಂಸದ ರಮೇಶ ಜಿಗಜಿಣಗಿ ಹೇಳಿದ್ದೇನು ಗೊತ್ತಾ?

RAMESH JIGAJINAGI IN SHANKHA NADA
ವಿಜಯಪುರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಶಂಖನಾದ ಅಭಿಯಾನದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.
Published on

ವಿಜಯಪುರ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿಗಟ್ಟಲೆ ಹಣ ವಂಚಿಸಿದ ಆರೋಪ ಹೊತ್ತಿರುವ ಉಡುಪಿಯ ಹಿಂದು ಹೋರಾಟಗಾರ್ತಿ ಚೈತ್ರಾ ಕುಂದಾಪುರ ರಮೇಶ ಜಿಗಜಿಣಗಿಗೂ ಒಂದು ಕೋಟಿ ರೂಪಾಯಿ ಕೇಳಿದ್ದಳಾ?

ಇಂಥದ್ದೊಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಖುದ್ದು ಸಂಸದ ರಮೇಶ ಜಿಗಜಿಣಗಿಯೇ ವಿಷಯ ಪ್ರಸ್ತಾಪಿಸಿದ್ದು, ಚೈತ್ರಾ ಕುಂದಾಪುರ ಯಾರು? ಎಂಥವಳು? ಎಂಬುದೇ ನನಗೆ ಗೊತ್ತಿಲ್ಲ. ಆದರೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಬರಹ ಹರಿಬಿಡುತ್ತಿದ್ದಾರೆಂದು ಖೇದ ವ್ಯಕ್ತಪಡಿಸಿದರು.

ಶನಿವಾರ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಂಖನಾದ ಅಭಿಯಾನದಲ್ಲಿ ಮಾತನಾಡಿದ ಅವರು, ಕೆಲವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆಡಳಿತ ವರ್ಗ, ರಾಜಕಾರಣಿಗಳು ಹಾಗೂ ಜನರ ನಡುವಿನ ಕೊಂಡಿಯಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು. ಬದಲಾಗಿ ವ್ಯಕ್ತಿಯ ತೇಜೋವಧೆಗೆ ಯತ್ನಿಸಬಾರದು ಎಂದು ಹೇಳಿದರು.

ಮಾಧ್ಯಮಗಳು ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗಬೇಕು. ಅದರ ಬದಲು ಉಪ್ಪು, ಖಾರ ಹಚ್ಚಿ ಜನರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕಾರ್ಯ ಮಾಡಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net