Bigg Boss ಮನೆಯಲ್ಲಿ ಕಿಚ್ಚು ಹಚ್ಚಿದ ಲಾಯರ್ ಜಗದೀಶ್​​ ಅವರ ಪತ್ನಿ ಹೇಗಿದ್ದಾರೆ ಗೊತ್ತಾ?

lawyer jagadish
Published on

ಬೆಂಗಳೂರು:  ಖಾಸಗಿವಾಹಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್ (Bigg Boss)​​ ಕಾರ್ಯಕ್ರಮ ದಿನದಿಂದ ದಿನಕ್ಕೆ ರಂಗೆರುತ್ತಿದೆ. ಒಂಟಿ ಮನೆಯ ಸ್ಪರ್ಧಿಗಳಲ್ಲಿ ಒಬ್ಬರು ಲಾಯರ್​ ಜಗದೀಶ್​​ ಕೂಡಾ ಒಬ್ಬರಾಗಿದ್ದಾರೆ. ಬಿಗ್‌ ಬಾಸ್‌ ಆರಂಭವಾಗಿ ಒಂದು ವಾರ ಕಳೆಯುವ ಮೊದಲೇ ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಗಲಾಟೆ ಹೆಚ್ಚಾಗಿದೆ. ಲಾಯರ್​ ಜಗದೀಶ್​​ ಅವರ ಕುಟುಂಬ ಹೇಗಿದೆ ಅವರ ಪತ್ನಿ ಯಾರು ಎಂದು ತಿಳಿಯಬೇಕು ಎನ್ನುವ ಕೂತೂಹಲ ನಿಮಗೆ ಇದ್ದರೆ ಇಲ್ಲಿದೆ ಕಂಪ್ಲೀಟ್​​ ಡೀಟೆಲ್ಸ್​​....

Lawyer Jagadish

ಜಗದೀಶ್ ಒಬ್ಬ ಭಾರತೀಯ ವಕೀಲರಾಗಿದ್ದು, ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಅವರ ಕಾನೂನು ಹೋರಾಟಗಳು ಮತ್ತು ಪ್ರಮುಖ ರಾಜಕಾರಣಿಗಳ ಸುತ್ತಲಿನ ವಿವಾದಗಳ ಮೂಲಕವಾಗಿ ಸುದ್ದಿಯಾಗಿದ್ದರು.

Lawyer Jagadish

2024 ರಲ್ಲಿ, ಬಾದ್‌ಶಾ ಕಿಚ್ಚ ಸುದೀಪ್ ಹೋಸ್ಟ್ ಮಾಡಿದ ಬಿಗ್ ಬಾಸ್ ಕನ್ನಡ ಸೀಸನ್ 11 ಗೆ ಸೇರುವ ಮೂಲಕ ಜಗದೀಶ್ ವಿಭಿನ್ನ ರೀತಿಯ ಸವಾಲನ್ನು ಸ್ವೀಕರಿಸಿದರು. ರಿಯಾಲಿಟಿ ಶೋನಲ್ಲಿ ಅವರ ಭಾಗವಹಿಸುವಿಕೆಯು ಅನೇಕರನ್ನು ಆಶ್ಚರ್ಯಗೊಳಿಸಿತು, ಏಕೆಂದರೆ ಕಾನೂನು ಪ್ರಪಂಚದ ವ್ಯಕ್ತಿತ್ವವು ಬಿಗ್ ಬಾಸ್ ಮನೆಯ ಡೈನಾಮಿಕ್ಸ್ ಅನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ನೋಡಲು ವೀಕ್ಷಕರು ಉತ್ಸುಕರಾಗಿದ್ದರು. ಕಾರ್ಯಕ್ರಮದಲ್ಲಿ ಜಗದೀಶ್ ಅವರ ಪ್ರಯಾಣವು ಅವರ ಪಾತ್ರದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದೆ. ಜಗದೇಶ್​​ ಅವರು ಬಿಗ್​ಬಾಸ್​​ ಮನೆಯಲ್ಲಿರುವ ಇತರ ಸ್ಪರ್ಧಿಗಳ ಜತೆ ನಿಂತು ಸರಿಸಮಾನವಾಗಿ ಆಟವಾಡುತ್ತಿದ್ದಾರೆ.

ಕೇವಲ ಕಾನೂನು ವಲಯದಲ್ಲಿಯೇ ಗುರುತಿಸಿಕೊಂಡಿರುವ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರತಿಭೆಯನ್ನು ಹೇಗೆ ತೋರಿಸಲಿದ್ದಾರೆಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಹೀಗಿರುವಾಗ ಜಗದೀಶ್​​ ಅವರ ಪತ್ನಿ ಹೇಗಿದ್ದಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಇದ್ದೆ ಇರುತ್ತದೆ. ನಾವು ಇಂದು ನಿಮಗೆ ಜಗದೀಶ್​​ ಅವರ ಪತ್ನಿ ಕುರಿತಾಗಿ ಪರಿಚಯ ಮಾಡಿಸಿಕೊಡಲಿದ್ದೇವೆ..

 ಜಗದೀಶ್​​ ಅವರು ತಮಗೆ ಪಾಠ ಹೇಳಿಕೊಟ್ಟ ಮೇಷ್ಟ್ರ ಅಕ್ಕನ ಮಗಳನ್ನೇ ಜಗದೀಶ್​​ ಅವರು ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ ಆದರೆ  ಈ ಕುರಿತಾಗಿ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಜಗದೀಶ್​ ಅವರ 2ನೇ ಪತ್ನಿ ಹೆಸರು ಸೌಮ್ಯ. ಈ ದಂಪತಿಗೆ ಓರ್ವ ಪುತ್ರ ಇದ್ದಾನೆ. ಪತ್ನಿ ಸೌಮ್ಯಾ ಕೂಡಾ ವಕೀತೆ ಅಂತೆ. ಮಗ ಕೂಡಾ ಲಾ ಓದುತ್ತಿದ್ದಾನೆ ಎನ್ನಲಾಗಿದೆ.

ಜಗದೀಶ್​​ ಅವರ ಪತ್ನಿ ಸೌಮ್ಯ ಅವರು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಸವಿರುಚಿ ಎನ್ನುವ ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.  ಈ ವೇಳೆ ಪತಿ ಕುರಿತಾಗಿ ಇಂಟ್ರಸ್ಟಿಂಗ್​ ಮಾಹಿತಿಯನ್ನು ಹಂಚಿ ಕೊಂಡಿದ್ದಾರೆ. ಜಗದೀಶ್​​ ಅವರು ಮನೆಯಲ್ಲಿ ಹೇಗೆ ಇರುತ್ತಾರೋ ಅದೇ ರೀತಿ ಬಿಗ್​ಬಾಸ್​​ ಮನೆಯಲ್ಲೂ ಕೂಡಾ ಇದ್ದಾರೆ ಎಂದು ಹೇಳಿದ್ದಾರೆ. ಈ ಪ್ರೋಮೊವನ್ನು ವಾಹಿನಿ ಸೋಶಿಯಲ್​​  ಮೀಡಿಯಾದಲ್ಲಿ ಹಂಚಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net