

ಚಿಕ್ಕಮಗಳೂರು: ನಗರಸಭೆ ನಾಮಿನಿ ಹಾಗೂ ಆಶ್ರಯ ಸಮಿತಿ ನೂತನ ಸದಸ್ಯರು ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಚುನಾಯುತ ಪ್ರತಿನಿಧಿಗಳಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ನೂತನ ನಗರಸಭಾ ನಾಮಿನಿ ಸದಸ್ಯರಾದ ಪ್ರಕಾಶ್‌ರೈ ಕೆಂಪನಹಳ್ಳಿ, ಮೊಹಿಯುದ್ದೀನ್ ಷರೀಫ್, ಕೀರ್ತಿಶೇಟ್, ಸುರೇಶ್, ತಬ್ರೀಜ್‌ಅಹ್ಮದ್ ಹಾಗೂ ಆಶ್ರಯ ಸಮಿತಿ ಸದಸ್ಯರಾದ ಪ್ರಸಾದ್ ಅಮೀನ್, ಮಧುಕುಮಾರ್, ಫಯಾಜ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಆಯಾ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವ ಕೆಲಸ ಮಾಡಲಿದ್ದು, ನಾಮಿನಿ ಸದಸ್ಯರುಗಳು ವಾರ್ಡಿನ ಬಡ ಕುಟುಂಬಕ್ಕೆ ಜನನ-ಮರಣ ಪ್ರಮಾಣ ಪತ್ರ, ಖಾತೆ ಮಾಡಿಸುವುದು ಹಾಗೂ ಮನೆ ನಿರ್ಮಿಸಲು ಅನುಮತಿ ಪತ್ರವನ್ನು ಒದಗಿಸುವ ಕಾರ್ಯಕ್ಕೆ ಮುಂದಾಗಿ ಜನತೆಯ ವಿಶ್ವಾಸ ಗಳಿಸಬೇಕು ಎಂದರು.
ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ಇರುವಷ್ಟು ದಿವಸಗಳಲ್ಲಿ ಕೈಗೊಂಡAತಹ ಕಾರ್ಯ ಗಳೇ ಜನಪ್ರತಿನಿಧಿಗಳಿಗೆ ಪ್ರೇರಣೆಯಾಗಲಿದೆ. ತಾವು ಕೂಡಾ ರಾಜಕೀಯ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ನಗರಸಭಾ ನಾಮಿನಿ ಸದಸ್ಯರಾಗಿ ಪಾದಾರ್ಪಣೆ ಮಾಡಿ ಇದೀಗ ಶಾಸಕನಾಗಿ ಕಾರ್ಯನಿರ್ವಹಿಸುವ ಸ್ಥಾನ ಪಡೆದಿz್ದೆÃನೆ ಎಂದು ಉದಾಹರಣೆ ನೀಡಿದರು.
ಆಶ್ರಯ ಸಮಿತಿ ಸದಸ್ಯರುಗಳು ಸಭೆಗಳಲ್ಲಿ ಹಾಜರಾಗುವ ಮೂಲಕ ಬಡವರಿಗೆ ನಿವೇಶನ ಒದಗಿ ಸುವ ನಿಟ್ಟಿನಲ್ಲಿ ದಾಖಲಾತಿ ಪಡೆದು ಅರ್ಜಿ ಸಲ್ಲಿಸುವ ಕೆಲಸ ಮಾಡಬೇಕು. ಸಿಕ್ಕಂತಹ ಅವಧಿಯಲ್ಲಿ ಕನಿಷ್ಟ ಕೆಲ ಕುಟುಂಬಕ್ಕಾದರೂ ನಿವೇಶನ ಒದಗಿಸಿಕೊಡಬೇಕು. ಜೊತೆಗೆ ಪಕ್ಷನಿಷ್ಟೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಹಾಗೂ ಆಶ್ರಯ ಸಮಿತಿ ಸದಸ್ಯರುಗಳು ನಿರಂತರ ಜನಸಂಪರ್ಕದಿAದ ಕಾರ್ಯನಿರ್ವಹಿಸಿದರೆ ಮುಂದೆ ಚುನಾಯಿತರಾಗಲು ಸಾಧ್ಯ. ಜೊತೆಗೆ ಪಕ್ಷವು ಅಧಿಕಾರ ಪಡೆದುಕೊಂಡರೆ ಮೀಸಲಾತಿ ಪ್ರಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಬಹುದು. ಹೀಗಾಗಿ ದೊರೆತ ಅವಕಾಶಗಳನ್ನು ಸದುಯೋಗಪಡಿಸಿಕೊಂಡು ಮುನ್ನೆಡೆಯಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಪಕ್ಷದಲ್ಲಿ ಹಲವಾರು ವರ್ಷಗಳಿಂದ ದುಡಿದಿರುವ ಮುಖಂಡರಿಗೆ ನಾಮಿನಿ ಸದಸ್ಯರ ಸ್ಥಾನವನ್ನು ಸರ್ಕಾರ ಒದಗಿಸಿದೆ. ಆ ಹಿನ್ನೆಲೆಯಲ್ಲಿ ಮುಖಂಡರುಗಳು ಜನತೆಯಲ್ಲಿ ಉತ್ತಮ ಬಾಂಧವ್ಯ ವೃದ್ದಿಸಿಕೊಂಡು ಮುನ್ನೆಡೆದರೆ ಯಶಸ್ಸು ಸಾಧ್ಯ ಎಂದರು.
ನಗರದ ವಾರ್ಡ್ಗಳಲ್ಲಿ ಸಂಕಷ್ಟದಿAದ ಕೂಡಿರುವ ಕುಟುಂಬಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಮಾತ್ರ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲು ಸಾಧ್ಯ. ಸದಸ್ಯರುಗಳು ಕಷ್ಟ-ಸುಖಗಳಿಗೆ ಸ್ಪಂದಿ ಸಬೇಕು. ಇಂಥ ಕಾರ್ಯಗಳಿಂದ ಮುಂದಿನ ದಿನಗಳಲ್ಲಿ ಅಧಿಕಾರ ಪಡೆದು ಇನ್ನಷ್ಟು ಜನಪರ ಕಾಳಜಿ ಹೊಂದಬಹುದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.