ಹೆಸರು ಉಳಿಯುವ ಕೆಲಸ ಮಾಡಿ

Do the work that will last the name
ಬಸವನಬಾಗೇವಾಡಿಯ ಬಸವ ಭವನದಲ್ಲಿ ಆಯೋಜಿಸಿದ್ದ ಸೌಹಾರ್ದ ಸಮಾವೇಶ ವಿಧಾನಸಭಾಧ್ಯ ಯು.ಟಿ.ಖಾದರ್​ ಮಾತನಾಡಿದರು. ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಜಮೀರ್​ ಮಸೀದಿಯ ಹಾಫೀಜ ಮೊಹ್ಮದಅಲಿ ಮೀಲ್ಲಿ, ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಇದ್ದರು.
Published on

ಬಸವನಬಾಗೇವಾಡಿ: ಉಸಿರು ನಿಂತರು ಹೆಸರು ಉಳಿಯುವ ಉತ್ತಮ ಕೆಲಸ ಮಾಡಬೇಕು ಎಂದು ವಿಧಾನಸಭಾಧ್ಯ ಯು.ಟಿ.ಖಾದರ್​ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸೌಹಾರ್ದ ಸಮಾವೇಶದಲ್ಲಿ ಪ್ರವಾದಿ ಮುಹಮ್ಮದ್​ ಪೈಗಂಬರವರ ಜೀವನ ಮತ್ತು ಸಂದೇಶದ ಮಾತನಾಡಿದರು.

ಒಳ್ಳೆಯ ಕಾರ್ಯ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ. ಸಮಾಜದಲ್ಲಿ ನಮ್ಮ ಬದುಕಿಗೊಂದು ಅರ್ಥ ಬರುತ್ತದೆ. ಹುಟ್ಟು ಸಾವಿನ ಮಧ್ಯೆ ಮನುಷ್ಯನ ಜೊತೆ ಬರುವುದು ಪ್ರೀತಿ ಮತ್ತು ವಿಶ್ವಾಸ ಮಾತ್ರ. ನಾವು ಸಂಪಾದಿಸಿದ ಆಸ್ತಿ, ಅಧಿಕಾರ ಬರುವುದಿಲ್ಲ. ಇದನ್ನು ಅರಿತುಕೊಂಡು ಸಮಾಜದಲ್ಲಿ ಶಾಂತಿಯಿಂದ ಬದುಕಬೇಕು ಎಂದರು.

ಯುವಕರು ತಮ್ಮ ಮನಸ್ಥಿತಿ ತಮ್ಮ ಹಿಡಿತದಲ್ಲಿಯೇ ಇಟ್ಟುಕೊಳ್ಳಬೇಕು. ಆವೇಶಕ್ಕೆ ಒಳಾಗಿ ತಪ್ಪು ಹೆಜ್ಜೆಯಿಟ್ಟು ಜೀವನ ಹಾಳು ಮಾಡಿಕೊಳ್ಳಬಾರದು. ಶರಣರುವ, ಸಾಧು&ಸಂತರು, ಸೋಪಿಗಳ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕಿವಿಮಾತು ಹೇಳಿದರು.

ಸಾನಿಧ್ಯ ವಹಿಸಿ ಮಾತನಾಡಿದ ಶಿರೂರ ಚಿತ್ತರಗಿಯ ಶ್ರೀ ಮಹಾಂತೇಶ್ವರ ತೀರ್ಥ ಡಾ.ಬಸವಲಿಂಗ ಸ್ವಾಮೀಜಿ, ನಿಮ್ಮ ಆತ್ಮ ಲಿಂಗದಲ್ಲಿ ದೇವರಿದ್ದಾನೆ. ನಿಮ್ಮಲ್ಲಿನ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಬೇಕಾದಲ್ಲಿ ಇಷ್ಟಲಿಂಗ ಪೂಜೆ ಮಾಡಿ. ಕುರಾನ್​ ಹಾಗೂ ಬಸವವಾದಿ ಶರಣರ ವಚನಗಳ ಸಾರ ಒಂದೆ ಆಗಿದೆ. ಅಧ್ಯಯನ ಕೊರತೆಯಿಂದ ಸಮಾಜದಲ್ಲಿ ಜಾತಿ, ಧರ್ಮದ ವಿಚಾರದಲ್ಲಿ ವಿಷಕಾರಿ ಅಂಶಗಳು ಬೇರು ಬಿಟ್ಟಿವೆ ಎಂದರು.

ಶಿವಪ್ರಕಾಶ ಶಿವಚಾರ್ಯ ಸ್ವಾಮೀಜಿ, ರಫೀಯುದ್ಧಿನ ಕುದ್ರೋಳಿ, ನೀಕಿತರಾಜ ಮೌರ್ಯ, ಭಟ್ಕಳದ ಅಬ್ದುಲ್​ ಅಲೀಮ್​ ಸಾಬ್​ ನದ್ವಿ, ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜಿತ ಪಾಟೀಲ ಮಾತನಾಡಿದರು.

ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಜಮೀರ್​ ಮಸೀದಿಯ ಹಾಫೀಜ ಮೊಹ್ಮದಅಲಿ ಮೀಲ್ಲಿ, ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕ್​ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ಸುರೇಶ ಹಾರಿವಾಳ ಇದ್ದರು.

ಯಜ್​ ಅವಟಿ ಸ್ವಾಗತಿಸಿದರು. ನಜೀರ್​ ದಡ್ಡಿ ಕಾರ್ಯಕ್ರಮ ನಿರೂಪಿಸಿದರು. ರಿಯಾನ್​ ಕೇರೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net