ಸುಸೂತ್ರ ಪರೀಕ್ಷೆ ನಡೆಸಿ

Do the Susutra test
ನಾಲತವಾಡ ಸಮೀಪದ ನಾಗರಬೆಟ್ಟದ ಎಕ್ಸ್‌ಫರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ನಡೆದ ಪಿಯುಸಿ ಪರೀಕ್ಷಾ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಪರೀಕ್ಷಾ ಮುಖ್ಯ ಅಧೀಕ್ಷಕ ಎಸ್.ಕೆ. ಹರನಾಳ ಮಾತನಾಡಿದರು. ಪರಮೇಶ್ವರಪ್ಪ ಕೋರವಾರ, ಡಾ. ದತ್ತಾತ್ರೇಯ ಮಳಖೇಡ, ಐ.ಎ. ಬಾಗವಾನ ಇತರರಿದ್ದರು.
Published on

ನಾಲತವಾಡ: ಶಿಕ್ಷಣ ಇಲಾಖೆ ರೂಪಿಸಿದ ಪರೀಕ್ಷಾ ನಿಯಮಗಳು ಮತ್ತು ಮಾನದಂಡಗಳನ್ನು ಅನುಸರಿಸುವ ಮೂಲಕ ಪಿಯುಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಕೊಠಡಿ ಮೇಲ್ವೀಚಾರಕರು ಬದ್ಧರಾಗಬೇಕು ಎಂದು ಪರೀಕ್ಷಾ ಮುಖ್ಯ ಅಧೀಕ್ಷಕ ಎಸ್.ಕೆ. ಹರನಾಳ ಹೇಳಿದರು.

ಇಲ್ಲಿಗೆ ಸಮೀಪದ ನಾಗರಬೆಟ್ಟ ಎಕ್ಸ್‌ಫರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಕಲು ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿಗಳಿಗೆ ಆಗಮಿಸುವಂತೆ ವಿದ್ಯಾರ್ಥಿಗಳತ್ತ ಗಮನ ಹರಿಸಬೇಕು. ವಿದ್ಯಾರ್ಥಿಗಳು ಕೊಠಡಿಗೆ ಆಗಮಿಸುವ ವೇಳೆ ಅವರ ಹಾಲ್ ಟಿಕೆಟ್ ಪರಿಶೀಲನೆ ಮಾಡಿ ಬಿಡಬೇಕು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್, ಕ್ಯಾಲ್ಕುೃಲೆಟರ್ ಸೇರಿ ಯಾವುದೇ ವಸ್ತುಗಳನ್ನು ತರದಂತೆ ನಿಗಾ ವಹಿಸಬೇಕು ಎಂದರು.

ಒಟ್ಟು 20 ಕೊಠಡಿಗಳಲ್ಲಿ 542 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ನಾಗರಬೆಟ್ಟದ 2 ಕೇಂದ್ರಗಳು ಸೇರಿ ಜಿಲ್ಲೆಯಾದ್ಯಂತ ಒಟ್ಟು 59 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ಬರೆಯುವ ಸಮಯದಲ್ಲಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ಶೀಘ್ರವೇ ಮುಖ್ಯ ಅಧೀಕ್ಷರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬೇಕು ಎಂದರು.

ಸಹಾಯಕ ಅಧೀಕ್ಷಕ ಪರಮೇಶ್ವರಪ್ಪ ಕೋರವಾರ, ವೀರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ದತ್ತಾತ್ರೇಯ ಮಳಖೇಡ, ಐ.ಎ. ಬಾಗವಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net