ಒಪ್ಪೊತ್ತಿನ ಊಟಕ್ಕೂ ಎಸ್ಸಿ-ಎಸ್ಟಿ ನಿಧಿ ಬೇಕೆ?

1
Published on

ತಿಪಟೂರು: ಪೌರಕಾರ್ಮಿಕರ ಒಪ್ಪೊತ್ತಿನ ಊಟಕ್ಕೂ ಎಸ್ಸಿ-ಎಸ್ಟಿ ನಿಧಿಯ ಹಣವೇ ಬೇಕೆ?. ಇದಕ್ಕಾಗಿ ಸರ್ಕಾರದಿಂದ ಬೇರೆ ಅನುದಾನ ಏಕೆ ಇಲ್ಲ ಎಂದು ದಲಿತ ಮುಖಂಡರು ಪ್ರಶ್ನಿಸಿದರು.


ನಗರದ ಕಲ್ಪತರು ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಶನಿವಾರ ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪ.ಜಾತಿ ಮತ್ತು ಹಿತರಕ್ಷಣಾ ಸಮಿತಿ ಸಭೆಯಲ್ಲಿ ಗಮನಾರ್ಹ ವಿಷಯಗಳು ಚರ್ಚೆಗೆ ಬಂದರೂ, ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ದೊರೆತಿದ್ದು ಬೆರಳೆಣಿಕೆಯಷ್ಟು ಮಾತ್ರ.
ಕಂಚಾಘಟ್ಟದ ದಲಿತ ಮುಖಂಡ ಸುರೇಶ್​ ಮಾತನಾಡಿ, ನಗರದ 15ನೇ ವಾರ್ಡಿನಲ್ಲಿ ದಲಿತರೇ ಇಲ್ಲದಿದ್ದರೂ ಅವರಿಗೆ ಮೀಸಲಾಗಿರುವ ಅನುದಾನವನ್ನು ಇತರ ಕಾಮಗಾರಿಗಳಿಗೆ ಬಳಸಲಾಗಿದೆ. ಎಸ್ಸಿ-&ಎಸ್ಟಿ ಅನುದಾನದಲ್ಲಿ ಮೀಸಲಾಗಿರುವ ಶೇ.25ರಷ್ಟು ಅನುದಾನ ಸದ್ಬಳಕೆಯಾಗಿಲ್ಲ. ದಲಿತರ ಮಕ್ಕಳಿಗೆ ನೀಡಬೇಕಿದ್ದ ಆರ್ಥಿಕ ನೆರವು ಮತ್ತು ಲ್ಯಾಪ್​ ಟಾಪ್​ಗಳನ್ನು ಇತರ ವರ್ಗದವರಿಗೆ ನೀಡಿರುವುದು ಏಕೆ ಎಂಬ ಪ್ರಶ್ನಿಸಿದಾಗ, ಆಯುಕ್ತ ವಿಶ್ವೇಶ್ವರ ಬದರಗಡೆ ಉತ್ತರಿಸಿ ದಲಿತರಿಗೆ ಮೀಸಲಿಟ್ಟ ಶೇ.25ರಷ್ಟು ಅನುದಾನಲ್ಲಿ ಪೌರಕಾರ್ಮಿಕರಿಗೆ ಒಪ್ಪೊತ್ತಿನ ಊಟ ನೀಡಲು ಬಳಸಲಾಗುತ್ತಿದೆ ಎಂದು ಹೇಳಿದಾಗ ಕೆರಳಿದ ದಲಿತ ಮುಖಂಡರು. ಒಪ್ಪೊತ್ತಿನ ಊಟಕ್ಕೂ ದಲಿತರಿಗೆ ಮೀಸಲಿಟ್ಟ ಹಣವೇ ಬೇಕೆ?. ಇತರ ಅನುದಾನ ಏಕಿಲ್ಲ ಎಂದು ಆಯುಕ್ತನ್ನು ತರಾಟೆಗೆ ತೆಗೆದುಕೊಂಡರು.


ಎನ್​ಎಫ್​ಬಿಎಸ್​ ಮತ್ತು ಅಂತಿಮಸಂಸ್ಕಾರಕ್ಕೆ ಸಂಬಂಧಿಸಿದಂತೆ 2018&2021ರವರೆಗೆ ಅರ್ಹ 400 ಫಲಾನುಭವಿಗಳಿಗೆ ನೀಡಬೇಕಿರುವ 20 ಲಕ್ಷ ರೂ. ಇನ್ನೂ ಅವರ ಖಾತೆಗೆ ಜಮಾ ಮಾಡದಿರುವ ವಿಷಯ ಚರ್ಚೆಯಾಯಿತು. ಗ್ರಾಪಂಗಳಲ್ಲಿ ಸಂಗ್ರಹವಾಗುವ ತೆರಿಗೆ ಹಣದ ಶೇ 25ರಷ್ಟನ್ನು ಬ್ಯಾಂಕ್​ ಖಾತೆಯಲ್ಲಿಟ್ಟು, ಅದನ್ನು ಎಸ್ಸಿ&ಎಸ್ಟಿ ಸಮುದಾಯದ ಕಲ್ಯಾಣ ಕಾರ್ಯಗಳಿಗೆ ಮೀಸಲಿಡಬೇಕೆಂಬ ಸರ್ಕಾರಿ ನಿಯಮ ಉಲ್ಲಂಘನೆ ಬಗ್ಗೆ ಮತ್ತು ನೆಲ್ಲಿಕೆರೆ ಗ್ರಾಪಂನಲ್ಲಿ ಎಸ್​ಸಿಎಸ್​ಪಿ&ಟಿಎಸ್​ಪಿ ಅಡಿ ಶೇ.25 ಅನುದಾನದಲ್ಲಿ 40 ಲಕ್ಷ ರೂ.ಹಣ ದುರುಪಯೋಗವಾಗಿರುವ ಬಗ್ಗೆ ಬಿ.ಎಂ.ಪ್ರಭುಸ್ವಾಮಿ ಕೇಳಿದ ಪ್ರಶ್ನೆಗೆ ಸೂಕ್ತ ಸಮಜಾಯಿಷಿ ಸಿಗಲಿಲ್ಲ.


ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಗ್ರೇಡ್​&-2 ತಹಸೀಲ್ದಾರ್​ ಎಸ್​.ಕೆ.ಜಗನ್ನಾಥ್​, ಬಿಇಒ ಜಿ.ಚಂದ್ರಯ್ಯ, ಲೋಕೋಪಯೋಗಿ ಇಲಾಖೆಯ ಎಇಇ ದಯಾನಂದ್​, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ತ್ರಿವೇಣಿ, ಕಚೇರಿಯ ಮಂಜುನಾಥ್​ ಇತರರು ಇದ್ದರು.

ಜೆಜೆಎಂ ಯೋಜನೆ ಕಾಮಗಾರಿಗೆ ಟೆಂಡರ್​ ನೀಡಿ ಒಂದೂವರೆ ವರ್ಷ ಕಳೆದರೂ ಸಮರ್ಪಕ ಕೆಲಸ ಮಾಡದ ಗುತ್ತಿಗೆದಾರನನ್ನು ಕೈಬಿಟ್ಟು ಹೊಸದಾಗಿ ಟೆಂಡರ್​ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕ ಕಾಮಗಾರಿ ನಡೆಯಲಿದೆ. ಕೆ.ಷಡಕ್ಷರಿ ಶಾಸಕ, ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net