ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ

KURGODU Sports
ಕುರುಗೋಡು ತಾಲೂಕಿನ ಹೊಸಗೆಣಿಕೆಹಾಳು ಗ್ರಾಮದಲ್ಲಿ ಗುರುವಾರ ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಸಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ರೂಪಾ ಜಾಲಿಹಾಳ ಚಾಲನೆ ನೀಡಿದರು. ಗ್ರಾಪಂ ಸದಸ್ಯರಾದ ಪಂಪನಗೌಡ, ಹನುಮಂತಪ್ಪ, ಆರೋಗ್ಯ ಅಧಿಕಾರಿಗಳಾದ ಸೈಯದ್ ಸುಲ್ತಾನ್, ತಿಮೋತಿ, ದೇವರಾಜ್ ಕಡೆಮನೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ. ಮಂಜುನಾಥ ಇತರರಿದ್ದರು.
Published on

ಕುರುಗೋಡು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭವ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದು ಸಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ರೂಪಾ ಜಾಲಿಹಾಳ ಹೇಳಿದರು.

ಹೊಸ ಗೆಣಿಕೆಹಾಳು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಹೆಲ್ತ್ ಕ್ಯಾಂಪ್‌ಗಳನ್ನು ಏರ್ಪಡಿಸುವುದು ಮತ್ತು 5 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಆಯುಷ್ಮಾನ್ ಕಾರ್ಡ್ ಮಾಡಿಸಬೇಕು. 30 ವರ್ಷ ಮೇಲ್ಪಟ್ಟವರು ಪ್ರತಿ ತಿಂಗಳು ನಿಯಮಿತವಾಗಿ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಅಂಗಾಂಗ ದಾನ ಮಾಡಲು ಮುಂದಾಗಬೇಕು ಎಂದರು. ಜನರಿಗೆ ಬಿಪಿ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ತಪಾಸಣೆ ನಡೆಸಲಾಯಿತು. ಸ್ಥಳದಲ್ಲಿಯೇ ಎಬಿಎಚ್‌ಎ ಕಾರ್ಡ್ ನೋಂದಣಿ ಮಾಡಲಾಯಿತು.

ಗ್ರಾಪಂ ಸದಸ್ಯರಾದ ಪಂಪನಗೌಡ, ಹನುಮಂತಪ್ಪ, ಆರೋಗ್ಯ ಅಧಿಕಾರಿಗಳಾದ ಸೈಯದ್ ಸುಲ್ತಾನ್, ತಿಮೋತಿ, ದೇವರಾಜ್ ಕಡೆಮನೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ. ಮಂಜುನಾಥ, ಆಪ್ತ ಸಮಾಲೋಚಕ ಕರಿಬಸಪ್ಪ , ಪಿಎಚ್‌ಸಿಒ ರೇಣುಕಾ, ಶಿವಕುಮಾರ್, ಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net