

ಶಿರಾ : ತಾಲೂಕಿನ ಭುವನಹಳ್ಳಿ ಸರ್ವೇ ನಂ. 72ರಲ್ಲಿ 15 ಎಕರೆ ಕೃಷಿ ಭೂಮಿಯನ್ನು ಯುವಜನ ಕ್ರೀಡಾಂಗಣ ಇಲಾಖೆಗೆ ವರ್ಗಾವಣೆ ಮಾಡದಂತೆ ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಜಿಲ್ಲಾಧ್ಯ ಕೆ.ಎಸ್.ಧನಂಜಯ್ ಆರಾಧ್ಯ ಒತ್ತಾಯಿಸಿದರು.
ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿ, ಭೂವನಹಳ್ಳಿ ಸರ್ವೇ ನಂ. 72ರಲ್ಲಿ ಕಳೆದ ಮುವತ್ತು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದು, ಭೂಮಿ ಮುಂಜುರಾತಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಏಪ್ರೀಲ್ 29ರಂದು ರಾಜ್ಯ ಸರ್ಕಾರ 15 ಎಕರೆ ಕೃಷಿ ಭೂಮಿಯನ್ನು ಯುವಜನ ಕ್ರೀಡಾಂಗಣ ಇಲಾಖೆಗೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ. ಉಳುಮೆ ಮಾಡುತ್ತಿರುವ ರೈತರಿಗೆ ಸರ್ಕಾರ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಈ ಭೂಮಿಯಲ್ಲಿ ಮಾವು, ಸೀಬೆ, ತೆಂದು ಸೇರಿದಂತೆ ಇತರ ತೋಟಗಾರಿಕೆ ಬೆಳೆ ಬೇಳೆದಿರುವ ಲವತ್ತಾದ ಕೃಷಿ ಭೂಮಿಯಾಗಿದ್ದು, ರೈತರ ಜೀವನಾದಾರವಾಗಿದೆ. ಏಕಾಏಕಿ ಕೃಷಿಯೇತರ ಉದ್ದೇಶಕ್ಕೆ ಕಾಯ್ದಿರಿಸಿ ಆದೇಶ ನೀಡಿರುವು ರೈತ ವಿರೋಧಿ ನಿಲುವಾಗಿದೆ. ಇದರಿಂದ ರೈತರ ಬದುಕುವ ಹಕ್ಕು, ದೇಶದ ಆಹಾರ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ. ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸದೆ ಹಾಲಿ ಉಳುಮೆ ಮಾಡುತ್ತಿರುವ ರೈತರಿಗೆ ಬಗರ್ಹುಕುಂ ಸಾಗುವಳಿ ಮೂಲಕ ಭೂಮಿ ಮುಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿದರು.