

ಇಳಕಲ್ಲ: ದೇವಸ್ಥಾನಗಳಲ್ಲಿ ನಡೆಯುವ ಕಾರ್ತಿಕೋತ್ಸವದಲ್ಲಿ ಉಣ್ಣುವ, ಬೆಲೆಬಾಳುವ ಎಣ್ಣೆ ಹಾಳು ಮಾಡಬಾರದೆಂದು ಚಿತ್ತರಗಿ ಪೀಠದ ಗುರುಮಹಾಂತ ಶ್ರೀಗಳು ಹೇಳಿದರು.
ಇಲ್ಲಿನ ವಿಜಯ ಮಹಾಂತೇಶ ಗದ್ದುಗೆಯಲ್ಲಿ ಸೋಮವಾರ ನಡೆದ ಲಘು ರಥೋತ್ಸವ ಮತ್ತು ಅರಿವಿನ ಬೆಳಕು ಕಾರ್ಯಕ್ರಮದಲ್ಲಿ ಗಣ್ಯರನ್ನು ಸತ್ಕರಿಸಿ ಅವರು ಮಾತನಾಡಿದರು.
ವಿಶ್ವನಾಥ ಪಾಟೀಲ, ಗುರಣ್ಣ ಮರಟದ, ಸಣ್ಣದುರ್ಗಪ್ಪ ಬಂಡಿ, ಸುಧಾರಾಣಿ ಸಂಗಮ, ಮಹಾಬಳೇಶ ಮರಟದ ಇತರರಿದ್ದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹನುಮಾನದಾಸ ಪವಾರ, ರಂಗಭೂಮಿ ಪ್ರಶಸ್ತಿ ವಿಜೇತರಾದ ಮಹಾದೇವ ಕಂಬಾಗಿ, ಗಂಗವ್ವ ಆರೇರ, ಸುವರ್ಣ ಸಂಭ್ರಮ ಪ್ರಶಸ್ತಿ ವಿಜೇತರಾದ ನೀಲಕಂಠ ಕಾಳಗಿ ಸುನಂದಾ ಕಂದಗಲ್ಲ, ಸಿತಿಮಾ ವಜ್ಜಲ, ಲಲಿತಾ ಹೊಸಪ್ಯಾಟಿ, ಅಕ್ಕಮಹಾದೇವಿ ಪ್ರಶಸ್ತಿ ವಿಜೇತೆ ಗಿರಿಜಾ ಶಿವಬಲ್ಲ, ಸಾಣೆಹಳ್ಳಿ ಶಿವಕುಮಾರ ಪ್ರಶಸ್ತಿ ವಿಜೇತ ಮಹಾಂತೇಶ ಗಜೇಂದ್ರಗಡ, ಇಳಕಲ್ಲ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಅರವಿಂದ ಮಂಗಳೂರ, ಲತಾ ಚಂದ್ರಹಾಸ ಹೇರೂರು ಅವರನ್ನು ಸನ್ಮಾನಿಸಲಾಯಿತು.