ಮಕ್ಕಳ ಬಾಲ್ಯ ಕಸಿಯದಿರಿ

Pandurangi
Published on

ಅಂಕೋಲಾ: ಮಕ್ಕಳ ಮೇಲಿನ ಅತಿಯಾದ ಕಾಳಜಿ ಅವರ ಬಾಲ್ಯವನ್ನು ಕಸಿದುಕೊಂಡಿದೆ. ಮಕ್ಕಳನ್ನು ತಮ್ಮ ವಾತಾವರಣದಲ್ಲಿ ಬೆಳೆಸುವ ಮೂಲಕ ಕನಸುಗಳು ನನಸಾಗಲು ಸಹಾಯ ಮಾಡಿ ಎಂದು ಮನರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.

ತಾಲೂಕಿನ ಜಮಗೋಡಿನಲ್ಲಿ ಅರ್ಪಿತಾ ಕ್ರಿಯೇಷನ್ಸ್ ಜಮಗೋಡ, ಅಕ್ಷರಾ ಫೌಂಡೇಷನ್ ಬೆಂಗಳೂರು ಹಾಗೂ ಜಿನದೇವ ಪ್ರಕಾಶನ ಹಿಚಕಡ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನೋಹರ ನಾಯಕ ಅವರ ಪಂಚ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಪುಸ್ತಕಗಳನ್ನು ಓದುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿ. ಮನೋಹರ ನಾಯಕ ಈ ಕೃತಿಗಳನ್ನು ಬರೆದು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಿದ್ದು ಸಾರ್ಥಕ ಎಂದರು.

ಹಿರಿಯ ಸಾಹಿತಿ ಶಾಂತಾರಾಮ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೋಹರ ನಾಯಕರ ಪ್ರತಿಯೊಂದು ಕೃತಿಯು ಪ್ರಾದೇಶಿಕ ಕಾದಂಬರಿಯಂತಿದೆ. ಅರ್ಪಿತ ಕ್ರಿಯೇಷನ್ಸ್ ಮೂಲಕ ಆರಂಭದಲ್ಲೇ ಸಹಾಯ ಹಸ್ತ ನೀಡುವ ಮೂಲಕ ಮಾದರಿ ಕಾರ್ಯಕ್ಕೆ ಈ ಸಂಸ್ಥೆ ಮುಂದಾಗಿದೆ. ಮನುಷ್ಯರಿಗೆ ಸಾಂಸ್ಕೃತಿಕ ಮುಖ ಮುಖ್ಯ. ಇಂದಿನ ಕಾಲದಲ್ಲಿ ಮನುಷ್ಯ ಮನುಷ್ಯನಾಗಲು ಕಾವ್ಯ ಸಾಹಿತ್ಯ ಇರಬೇಕು. ರಾಜಕೀಯಕ್ಕೆ ಸಾಹಿತ್ಯದ ದೀಕ್ಷೆಯಾಗುವ ಮೂಲಕ ಉತ್ತಮ ಸಾಹಿತಿ ಸೃಷ್ಟಿಯಾಗಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ. ಗುಂದಿ, ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿದರು. ರಾಜಶ್ರೀ ನಾಯಕ್ ಸ್ವಾಗತಿಸಿದರು. ರಾಜೇಶ್ ಮಾಸ್ಟರ್, ಅರ್ಪಿತ ನಾಯಕ್ ನಿರ್ವಹಿಸಿದರು. ಪ್ರೊ. ಅರವಿಂದ ಕುಲಕರ್ಣಿ ಧಾರವಾಡ, ಅಕ್ಷರಾ ಫೌಂಡೇಷನ್ ಅಧ್ಯಕ್ಷ ಕೆ.ಎಚ್. ನಾಯಕ, ಬೀರಣ್ಣ ನಾಯಕ ಮೊಗಟಾ, ಮಂಜುನಾಥ ಗಾಂವಕರ ಬರ್ಗಿ ವೆಂಟ ಮಾಸ್ತರ ಪುಸ್ತಕ ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net