ಆರೋಗ್ಯದ ಬಗೆಗೆ ನಿರ್ಲಕ್ಷ್ಯ ತೋರಬೇಡಿ

AROGYA SHIBHIRA
Published on

ಜೊಯಿಡಾ: ಆರೋಗ್ಯ ರಕ್ಷಣೆಯಲ್ಲಿ ದಿನಚರಿ ಮತ್ತು ಜವಾಬ್ದಾರಿ ಅತೀ ಮುಖ್ಯ. ಆರೋಗ್ಯದ ಬಗ್ಗೆ ಯಾರೊಬ್ಬರೂ ನಿರ್ಲಕ್ಷ್ಯ ತೋರಬಾರದು ಎಂದು ಸಾಮಾಜಿಕ ಕಾರ್ಯಕರ್ತ ರವಿ ರೇಡ್ಕರ ಹೇಳಿದರು.

ಸಂಜೀವಿನಿ ಸೇವಾ ಟ್ರಸ್ಟ್, ಏಕಲ್ ಅಭಿಯಾನ ಬೆಳಗಾವಿ ಹಾಗೂ ಕ್ರುಗರ್ ಫೌಂಡೇಷನ್ ಕಾರವಾರ ಆಶ್ರಯದಲ್ಲಿ ಬಿರಂಪಾಲಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ. ವೈಶಾಲಿ ಕಿತ್ತೂರ, ನೇತ್ರ ತಜ್ಞ ಡಾ. ಸಂತೋಷ ನಂದಗಡಕರ್, ವಸಂತ ಬಾಳಿಗಾ, ಡಾ. ಗಣೇಶ್ ವಿರಕ್ತಿಮಠ ಅವರ ತಂಡ 110 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಔಷಧ ನೀಡಿತು. ಗವಳಿವಾಡಾ ಹಾಗೂ ಕ್ರಿಶ್ಚಿಯನ್​ವಾಡಾ ಅಂಗನವಾಡಿ ಮಕ್ಕಳಿಗೆ ಬಟ್ಟೆ ಮತ್ತು ಕಂಪಾಸ್ ವಿತರಿಸಲಾಯಿತು.

ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಸುನೀಲ ದೇಸಾಯಿ, ಅಶ್ವಿನಿ ಪಾಟೀಲ ಸಂಜೀವಿನಿ ಸಮಿತಿ ಸದಸ್ಯ ನಾರಾಯಣ ಹೆಬ್ಬಾರ, ಉಮೇಶ ವೇಳಿಪ, ಆದಿತ್ಯ ರೇಡ್ಕರ್, ಗ್ರಾಪಂ ಸದಸ್ಯೆ ಪ್ರಭಾವತಿ ಪಾಟೇಕರ, ದತ್ತು ವರಕಟಕರ, ತುಷಾರ ಸುಂಗಟಣಕರ, ಇತರರು ಉಪಸ್ಥಿತರಿದ್ದರು. ಸಂಜೀವಿನಿ ಸಂಯೋಜಕ, ಜಯಂತ ಗಾವಡಾ, ಈಶ್ವರಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net