ಪಾಲಕರ ಆಸೆ ಆಕಾಂಕ್ಷೆಯನ್ನ ಮಕ್ಕಳ ಮೇಲೆ ಹೇರಬೇಡಿ

5adarshkdga6
Published on

ಮಡಿಕೇರಿ: ಪಾಲಕರು ತಮ್ಮ ಆಸೆ ಆಕಾಂಕ್ಷೆಯನ್ನು ಮಕ್ಕಳ ಮೇಲೆ ಹೇರಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಸಲಹೆ ಮಾಡಿದರು.


ಮಡಿಕೇರಿಯ ಕ್ರೆಸೆಂಟ್ ಶಾಲಾ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.


ಮಕ್ಕಳಿಗೆ ಅವರದೇ ಆದ ಭಾವನೆ, ಕನಸು ಇದೆ. ಮಕ್ಕಳನ್ನು ಯಂತ್ರ ಮಾನವನಂತೆ ಕಾಣಬಾರದು. ಪಾಲಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರಬಾರದು. ಇದರಿಂದ ಅವರ ಪ್ರತಿಭೆಗಳಿಗೆ ತಡಯಾಗಬಹುದು ಎಂದರು.


ಇಂದು ಶಿಕ್ಷಣ ವ್ಯಾಪಾರಿಕರಣಗೊಂಡಿದ್ದು, ಸಾಮಾನ್ಯ ಜನರ ಮಕ್ಕಳಿಗೆ ಉತ್ತಮ ಶಿಕ್ಷಣ ಕಷ್ಟಕರವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಕ್ರೆಸೆಂಟ್ ಶಾಲಾ ಮಂಡಳಿ ಎಲ್ಲಾ ಜನಾಂಗದ ಮಕ್ಕಳಿಗೆ ಕೈಗೆಟುಕುವ ಶುಲ್ಕ ನಿಗದಿ ಮಾಡುವ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿ ರೂಪುಗೊಂಡಿದೆ. ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ವೈಯಿಸುವ ಜನರು ತಮ್ಮ ಮಕ್ಕಳ ಕಲಿಕೆಗೆ ಸಣ್ಣ ಶುಲ್ಕಗಳ ನೀಡಲು ಹಿಂಜರಿಯುತ್ತಿರುವುದು ಖೇಧಕರ ಎಂದು ಬೇಸರ ವ್ಯಕ್ತಪಡಿಸಿದರು.


ಕ್ರೆಸೆಂಟ್ ಶಾಲಾ ಮಂಡಳಿಯ ಅಧ್ಯಕ್ಷ ನಿಝಾಮುದ್ದೀನ್ ಸಿದ್ದೀಖ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯದರ್ಶಿ ಜಿ.ಎಚ್.ಮೊಹಮ್ಮದ್ ಹನೀಫ್, ಸದಸ್ಯ ಎಸ್.ಬಿ.ಗಯಾಝುದ್ದೀನ್, ಕೋಶಾಧಿಕಾರಿ ಫಯಾಝ್ ಅಹ್ಮದ್, ಪ್ರಮುಖರಾದ ಲಿಯಾಖತ್ ಅಲೀ, ಇಸ್ಮಾಯಿಲ್ ಹಾಗೂ ಪ್ರಾಂಶುಪಾಲ ಜಾಯಿಶ್ ವಿನಯ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net