

ಹುಬ್ಬಳ್ಳಿ: ವಿಶ್ವಮೂಲವ್ಯಾಧಿ ದಿನಾಚರಣೆ ಅಂಗವಾಗಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನಿಮಾ) ಧಾರವಾಡ ಘಟಕ, ಹಿಮಾಲಯ ಡ್ರಗ್ಸ್ ಕಂಪನಿ ಸಹಯೋಗದಲ್ಲಿ ಇಲ್ಲಿನ ಹೆಗ್ಗೇರಿಯ ಆಯುರ್ವೆದ ಮಹಾವಿದ್ಯಾಲಯದ ಶಲ್ಯತಂತ್ರ ವಿಭಾಗದಲ್ಲಿ ಮೂಲವ್ಯಾಧಿ, ಇತರ ಗುದಗತ ರೋಗಗಳ ಬಗ್ಗೆ ಜಾಗೃತಿ ಮತ್ತು ವಿಶೇಷ ತಪಾಸಣಾ ಶಿಬಿರ ಸೋಮವಾರ ನಡೆಯಿತು.
ಶಸ್ತ್ರ ಚಿಕಿತ್ಸಕ ಡಾ. ಪವನ ಜೋಶಿ ಉದ್ಘಾಟಿಸಿ ಮಾತನಾಡಿ, ಮೂಲವ್ಯಾಧಿ ರೋಗಕ್ಕೆ ಸಂಬಂಧಿಸಿದಂತೆ ರೋಗಿಗಳು ಸಂಕೋಚ ಪಡಬಾರದು. ಮೂಲವ್ಯಾಧಿಯು ಕ್ಯಾನ್ಸರ್ ರೋಗ ಉಂಟು ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಮಾತನಾಡಿ, ಕಳೆದ 70 ವರ್ಷಗಳಿಂದ ಆಯುರ್ವೆದ ಮಹಾವಿದ್ಯಾಲಯದ ಶಲ್ಯತಂತ್ರ ವಿಭಾಗದಲ್ಲಿ ಸಾವಿರಾರು ಮೂಲವ್ಯಾಧಿ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಉತ್ತರ ಕರ್ನಾಟಕದಲ್ಲಿಯೇ ನಮ್ಮ ಆಯುರ್ವೆದ ಕಾಲೇಜ್ ಹೆಸರು ಮಾಡಿದೆ ಎಂದರು.
ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ.ಸಿ. ತ್ಯಾಗರಾಜ ಮಾತನಾಡಿದರು.
ಕಾರ್ಯದರ್ಶಿ ಸಂಜೀವ ಜೋಶಿ, ಖಜಾಂಚಿ ಎಸ್.ಆರ್. ಮಾಮಲೆದೇಶಪಾಂಡೆ, ಡೀನ್ ಡಾ. ಜೆ.ಆರ್. ಜೋಶಿ, ಡಾ. ಉಷಾ ಹೊಸಮನಿ, ಡಾ. ಪ್ರಭಾಕರ ತಾಸೀನ, ಡಾ. ರಂಜೀತಕುಮಾರ, ಡಾ. ಎಸ್.ಜಿ. ಚವ್ಹಾಣ, ಡಾ. ಪದ್ಮಾವತಿ ಕುಲಕರ್ಣಿ, ಡಾ. ಲಕ್ಷ್ಮೀ ಪಾಟೀಲ, ಡಾ. ಎಂ.ಎಂ. ರೋಣಿಮಠ, ಡಾ. ಎನ್.ಎನ್. ಬರದ್ವಾಡ, ಡಾ. ಸಿದ್ದನಗೌಡ ಪಾಟೀಲ, ಡಾ. ಚಂದ್ರಭೂಷಣ ಸಿನ್ಹಾ, ಡಾ. ಪ್ರಿಯಾಂಕ ಕೋನ, ಇತರರು ಇದ್ದರು.