

ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆ ವಶದಲ್ಲಿರುವ ಖಾಲಿ ಜಾಗ ಹಾಗೂ ಇತರೆ ಕಟ್ಟಡಗಳನ್ನು ಕಂದಾಯ ಭವನ ನಿರ್ಮಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಜಿಲ್ಲಾ ನಿವೃತ್ತ ಪೊಲೀಸ್ ಅಽಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಽಕಾರಿಗಳು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಗರದ ಹೃದಯಭಾಗದಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಒಟ್ಟು 25.37ಎಕರೆ ಜಾಗವಿದೆ. ಈ ಜಾಗದಲ್ಲಿ ಕಂದಾಯ ಭವನ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಜಾಗ ಬಿಟ್ಟರೆ ಬೇರೆಲ್ಲೂ ಪೊಲೀಸ್ ಇಲಾಖೆಗೆ ಜಾಗ ಇಲ್ಲ. ಅಲ್ಲದೆ ಇಲ್ಲಿ ಸಾಗುವಾನಿ, ನೀಲಗಿರಿ ಮುಂತಾದ ಬೆಲೆ ಬಾಳುವ ಮರಗಳಿವೆ. ಈ ಜಾಗದಲ್ಲಿಯೇ ಪೊಲೀಸ್ ಠಾಣೆಗಳು, ಡಿಎಸ್‌ಪಿ ಕಚೇರಿ ಕಟ್ಟೆ ಸೇರಿದಂತೆ ವಿವಿಧ ಕಟ್ಟಡಗಳಿವೆ. ಇದನ್ನು ಸುಸಜ್ಜಿತವಾಗಿ ಪೊಲೀಸ್ ಕಮಿಷನರೇಟ್ ಮಾಡಬೇಕಾಗಿದೆ. ಆದ್ದರಿಂದ ಪೊಲೀಸ್ ಇಲಾಖೆಯ ಕೆಲಸಕ್ಕೇ ಈ ಜಾಗ ಬಳಕೆಯಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಪದಾಽಕಾರಿಗಳಾದ ಎಚ್.ಮಂಜಪ್ಪ, ನಾಗರಾಜ್, ಎಸ್.ಜಿ.ನಾಯಕ್, ರಾಮಕೃಷ್ಣ ಇತರರಿದ್ದರು.