

ಬೋರಗಾಂವ: ಪಟ್ಟಣದಲ್ಲಿ ಹೊರ ರಾಜ್ಯದ ಕ್ಷೌರಿಕರಿಗೆ ಅವಕಾಶ ನೀಡಬಾರದು ಎಂದು ಶ್ರೀಸಂತ ಸೇನಾ ಕ್ಷೌರಿಕರ ಸಂಘಟನೆ ವತಿಯಿಂದ ಶನಿವಾರ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಅಪ್ಪಾಸಾಹೇಬ ಹಳಿಜೋಳೆ ಮಾತನಾಡಿ, ಪಟ್ಟಣದಲ್ಲಿ 18 ಸಲೂನ್ ಅಂಗಡಿಗಳಿದ್ದು, ಏಳು ದಶಕಗಳಿಂದ ಕ್ಷೌರಿಕ ವೃತ್ತಿ ನಂಬಿ ಬದುಕು ಸಾಗಿಸುತ್ತಿದ್ದೇವೆ. ಹೊರ ರಾಜ್ಯದ ಸಲೂನ್ ಅಂಗಡಿ ಸ್ಥಾಪನೆಗೆ ಮುಂದಾಗುತ್ತಿವೆ. ಅವರಿಗೆ ಪರವಾನಗಿ ನೀಡಿದಲ್ಲಿ ಸ್ಥಳೀಯ ಕ್ಷೌರಿಕರ ಬದುಕು ಬೀದಿಗೆ ಬರುತ್ತವೆ. ಹಾಗಾಗಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಸಂದೀಪ ಶಿಂಧೆ ಮಾತನಾಡಿ, ಹೊರ ಕ್ಷೌರಿಕರಿಗೆ ಪರವಾನಗಿ ನೀಡಿದಲ್ಲಿ ಸ್ಥಳೀಯ ಕ್ಷೌರಿಕರು ಜೀವನ ನಡೆಸುವುದು ಕಷ್ಟವಾಗುತ್ತದೆ. ನ್ಯಾಯ ಸಿಗುವವರೆಗೂ ಅನಿರ್ಧಿಷ್ಟಾವಧಿ ಕೆಲಸ ನಿಲ್ಲಿಸಿದ್ದೇವೆ ಎಂದರು.
ಅಣ್ಣಪ್ಪ ಹೊನಮಾನೆ, ಸುನೀಲ ಸಾಳುಂಕೆ, ವಿಠ್ಠಲ ಹಡಪದ, ರಾಮದಾಸ ಸಾಳುಂಕೆ, ಸಚಿನ ಹಳಿಜೋಳೆ, ಸುಭಾಷ ಹಳಿಜೋಳೆ, ಸೂರದಾಸ ಸಾಳುಂಕೆೆ, ಸಚಿನ ಕೋರೆ, ರಾಹುಲ್ ಕೋರೆ, ಪುರಂದರ ಸಾಳುಂಕೆೆ, ಸ್ವಪ್ನಿಲ ಹೊನಮಾನೆ, ವರದ ಕೋರೆ, ಸುರೇಶ ಹಳಿಜೋಳೆ,
ಸಂಜಯ ಹಳಿಜೋಳೆ, ಸದಾಶಿವ ಸಂಕಪಾಳ ಹಾಗೂ ಇತರರು ಇದ್ದರು. 192