ಬೆಳವಣಿಕಿಯಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಬೇಡಿ

RON PROTEST
Published on

ರೋಣ: ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಹೊಸ ಮದ್ಯದಂಗಡಿಗೆ ಪರವಾನಗಿ ನೀಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ, ಭೀಮ್ ಆರ್ವಿು ಏಕ್ತಾ ಮಿಷನ್ ಮತ್ತು ಬೆಳವಣಿಕಿ ಗ್ರಾಮಸ್ಥರು ಪಟ್ಟಣದ ಅಬಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಬಕಾರಿ ಡಿವೈಎಸ್ಪಿ ಭೀಮಣ್ಣ ರಾಥೋಡ ಅವರಿಗೆ ಮನವಿ ಸಲ್ಲಿಸಿದರು.

ಕದಸಂ ತಾಲೂಕಾಧ್ಯಕ್ಷ ಹನುಮಂತ ಚಲವಾದಿ ಮಾತನಾಡಿ, ಬೆಳವಣಕಿ ಗ್ರಾಮದಲ್ಲಿ ಹೊಸದಾಗಿ ಮದ್ಯದಂಗಡಿಗೆ ಪರವಾನಗಿ ನೀಡಬಾರದು. ಒಂದು ವೇಳೆ ಪರವಾನಗಿ ನೀಡಿದ್ದರೆ ಅದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಭೀಮ್ ಆರ್ವಿು ಏಕ್ತಾ ಮಿಷನ್ ತಾಲೂಕಾಧ್ಯಕ್ಷ ಪುಂಡಲೀಕ ಮಾದರ ಮಾತನಾಡಿ, ಗ್ರಾಮದಲ್ಲಿ ಹೊಸದಾಗಿ ಮದ್ಯದಂಗಡಿಯ ಲೈಸೆನ್ಸ್ ನೀಡುವುದನ್ನು ಹಿಂಪಡೆಯಬೇಕು. ಅಲ್ಲಿ ಕಟ್ಟಿರುವ ಕಟ್ಟಡ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು. ಆ ಕಟ್ಟಡದ ಮಧ್ಯೆಬಡವರು ವಾಸಿಸುತ್ತಿದ್ದಾರೆ ಮತ್ತು ಮಹಿಳೆಯರು ದೇವಸ್ಥಾನಕ್ಕೆ ಹೋಗಿ ಬರುವಾಗ ತೊಂದರೆಗಳಾಗಬಹುದು ಎಂದರು.

ಬಸವರಾಜ ಕಾಳೆ, ಚಂದ್ರು ಅಬ್ಬಿಗೇರಿ, ಮುತ್ತು ನಂದಿ, ಮಹೇಶ ಮಾದರ, ರಮೇಶ ಮಾದರ, ಸಿದ್ದು ಅಮರಾವತಿ, ಸಾಗರ ಕಾಳೆ, ಭೀಮಪ್ಪ ದೊಡ್ಡಮನಿ, ನಾಗರಾಜ ದೊಡ್ಡಮನಿ, ಗೋಪಾಲ ತಾಳಿ, ವಿಜಯ ಚಲವಾದಿ, ಬಸವರಾಜ ಹಲಗಿ, ಮಂಜುನಾಥ ಚಲವಾದಿ, ಪ್ರಮೋದ ಚಲವಾದಿ, ಬಸವರಾಜ ಪೂಜಾರ, ಫಕೀರಪ್ಪ ಮಾದರ, ಹನುಮಂತ ಮುದೇನಗುಡಿ, ಬಸವರಾಜ ಕುರಿ, ವಸಂತ ಚಲವಾದಿ, ಇಮಾಮ್ ಹೊಸಳ್ಳಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net