ಎಚ್.ಡಿ.ಕೋಟೆ: ಒಳ ಮೀಸಲಾತಿ ಜಾರಿ ಮಾಡದೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂದು ಮಾತಂಗ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ರವೀಶ್ ಸರ್ಕಾರಕ್ಕೆ ಒತ್ತಾಯಿಸಿದರು.
ಸದಾಶಿವ ಆಯೋಗದ ವರದಿ ಹಾಗೂ ಮಾದುಸ್ವಾಮಿ ಆಯೋಗದ ವರದಿಯನ್ನು ಹಿಂದಿನ ಸರ್ಕಾರ ಅಂಗೀಕಾರ ಮಾಡಿದರು ಕೂಡ ಈಗಿನ ಕಾಂಗ್ರೆಸ್ ಸರ್ಕಾರ ಜಾರಿ ಮಾಡದೆ ವಿಳಂಬ ಮಾಡಿ ಮತ್ತೊಂದು ಆಯೋಗ ರಚನೆ ಮಾಡಿ ವರದಿ ಮಾಡಿಸಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರ್ಕಾರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಆದೇಶಿಸಿದ್ದು ತಕ್ಷಣವೇ ತಡೆ ಹಿಡಿಯಬೇಕು. ಒಳ ಮೀಸಲಾತಿ ಜಾರಿ ಆದ ನಂತರ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಿದರೆ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುತ್ತದೆ. ಇಲ್ಲವಾದರೆ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ತಿಳಿಸಿದರು.
ಸದಾಶಿವ ಮತ್ತು ಮಾದುಸ್ವಾಮಿ ಆಯೋಗದ ವರದಿಯನ್ನು ಜಾರಿ ಮಾಡಲು ಒತ್ತಾಯಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅ.16 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಸಮುದಾಯದ ಮುಖಂಡರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಲು ಮನವಿ ಮಾಡಿದರು.
ಬೂದನೂರು ವೆಂಕಟೇಶ್, ಗಿರಿ ಪ್ರಸಾದ್, ಶಿವಯ್ಯ, ಶಿವಾಜಿ, ಚೇತನ್, ಶಿವರಾಜಯ್ಯ, ಸರಗೂರು ಶ್ರೀನಿವಾಸ್, ಯಡತೊರೆ ಡಿ.ನಾಗರಾಜು, ಮಹೇಂದ್ರ ಇದ್ದರು.