ಕಾನೂನುಬಾಹಿರ ಚಟುವಟಿಕೆ ನಡೆಸದಿರಿ

GKN roudi
Published on

ಗೋಕರ್ಣ: ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯಲ್ಲಿರುವ ವಿವಿಧೆಡೆಗಳಲ್ಲಿನ ರೌಡಿಶೀಟರ್‌ಗಳ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಅವರೊಂದಿಗೆ ಮಾತುಕತೆ ನಡೆಸಿದ ಅಧಿಕಾರಿಗಳು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯ ಮಹತ್ವವನ್ನು ವಿವರಿಸಿ ಅವುಗಳನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ತಿಳಿಹೇಳಿದರು.

ಇಲ್ಲಿನ ಗಂಗಾವಳಿ ಗ್ರಾಮದಿಂದ ಬರ್ಗಿ-ಕಿಮಾನಿ ವರೆಗೆ ಕಾರ್ಯ ವ್ಯಾಪ್ತಿ ಹೊಂದಿರುವ ಸ್ಥಳೀಯ ಠಾಣೆಯ ಅಂದಾಜು 22 ಕಿಮಿ. ಪ್ರದೇಶದಲ್ಲಿ 19 ರೌಡಿಶೀಟರ್‌ಗಳಿದ್ದಾರೆ ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿ ಜತೆ ಪಿಎಸ್‌ಐ ಖಾದರ್ ಬಾಷಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net