

ಭದ್ರಾವತಿ: ಭದ್ರಾವತಿ ಮಂಡಲ ಬಿಜೆಪಿ ರೈತ ಮೋರ್ಚಾದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕದ ರೈತರಿಗೆ ಕುಡಿಯಲು ನೀರು ಇಲ್ಲದೆ ಇರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸರಿಯಾದ ಕ್ರಮವಲ್ಲ. ಆನಿಯಮಿತ ಲೋಡ್ ಶೆಡ್ಡಿಂಗ್ ಕಾರಣದಿಂದಾಗಿ ರೈತರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ತೂಂದರೆಯಾಗುತ್ತಿದೆ. ಅಲ್ಲದೆ ರೈತರಿಗೆ ನೀಡಲಾಗುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ತಡೆ ಹಿಡಿದಿರುವುದು ಸರಿಯಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಧರ್ಮಪ್ರಸಾದ್, ಪ್ರಮುಖರಾದ ಮಂಗೋಟೆ ರುದ್ರೇಶ್, ಚನ್ನೇಶ್, ಅವಿನಾಶ್, ಸುರೇಶಪ್ಪ, ಚಂದ್ರು, ಚಂದ್ರಪ್ಪ. ನಾಗರಾಜ್ ಅಂಬೋರೆ, ಆನಂದ್, ಕರಿಗೌಡ್ರು, ಗೋಕುಲಕೃಷ್ಣ, ಮಲ್ಲೇಶ್, ಶೇಖರಪ್ಪ, ನಾರಾಯಣಪ್ಪ, ವೆಂಕಟೇಶ್, ರಾಜಶೇಖರ್, ಅನುಷಾ, ಆಶಾ ಪುಟ್ಟಸ್ವಾಮಿ, ಮಂಡಲ ಮೋರ್ಚಾಗಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಇದ್ದರು.