ಕರ್ತವ್ಯ ಲೋಪ ಮಾಡಬೇಡಿ: ನ್ಯಾ. ಕೆ.ಎನ್. ಫಣೀಂದ್ರ

21 Dwd 5 Justice K.N. Phaneendra
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾರ್ವಜನಿಕ ಸೇವೆಯೇ ನಮ್ಮ ಗುರಿ. ವಿನಾಕಾರಣ ವಿಳಂಬ, ತಪ್ಪು ಮಾಹಿತಿ, ನಿಧಾನಗತಿ ಅನುಸರಿಸುವ ಮೂಲಕ ಕರ್ತವ್ಯಲೋಪ ಮಾಡಬೇಡಿ. ಪ್ರತಿಯೊಬ್ಬ ಅಽಕಾರಿ ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.

ಅಽಕಾರಿಗಳ ವಿರುದ್ಧ ಸುಳ್ಳು ದೂರು ದಾಖಲು, ಕರ್ತವ್ಯ ನಿರ್ವಹಣೆ ಎದುರಾಗುತ್ತದೆ. ಲೋಕಾಯುಕ್ತವು ಈ ಬಗ್ಗೆ ತನಿಖೆ ಮಾಡಿ ರಕ್ಷಣೆ ನೀಡುತ್ತದೆ. ಕರ್ತವ್ಯ ಲೋಪ ಮಾಡುವ ಅಽಕಾರಿ, ನೌಕರರ ವಿರುದ್ಧ ಲೋಕಾಯುಕ್ತ ಕಾಯ್ದೆ ಪ್ರಕಾರ ಕಠಿಣ ಕ್ರಮಕ್ಕೆ ಶಿಫಾರಸು ಮಾಡುತ್ತದೆ. ಅಧಿಕಾರಿಗಳು ಭ್ರಷ್ಟಾಚಾರ, ಪಕ್ಷಪಾತ, ಜಾತಿವಾದ ಮಾಡಬಾರದು. ರಾಜ್ಯದಲ್ಲಿ ಸುಮಾರು 8 ಕೋಟಿ ಜನಸಂಖ್ಯೆ ಇದ್ದು, 7 ಲಕ್ಷ ಸರ್ಕಾರಿ ನೌಕರರಿದ್ದಾರೆ. ಪ್ರತಿಯೊಬ್ಬರ ಹಕ್ಕುಗಳ ರಕ್ಷಣೆ ನೌಕರರ ಮೇಲಿದೆ. ನ್ಯಾಯಾಂಗ, ಶಾಸಕಾಂಗಕ್ಕಿ0ತ ಹೆಚ್ಚಿನ ಜವಾಬ್ದಾರಿ ಕಾರ್ಯಾಂಗದ ಮೇಲಿದೆ. ಅಧಿಕಾರಿಗಳು ಕಾನೂನಿನ ಅರಿವು ಹೊಂದಿರಬೇಕು. ಸುಳ್ಳು ಮತ್ತು ದುರುದ್ದೇಶಪೂರಿತ ದೂರು ದಾಖಲಿಸುವವರ ವಿರುದ್ಧ ಕ್ರಮ ಜರುಗಿಸಿದ ನಿದರ್ಶನಗಳಿವೆ ಎಂದರು.

ಜಿಲ್ಲಾಽಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಡಿಸಿಪಿಗಳಾದ ಮಾನಿಂಗ ನಂದಗಾವಿ, ಸಿ.ಆರ್. ರವೀಶ, ಲೋಕಾಯುಕ್ತ ಅಪರ ನಿಬಂಧಕರಾದ ಪಿ. ಶ್ರೀನಿವಾಸ, ನರಸಿಂಹಸಾ ಎಂ.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಸಿವಿಲ್ ನ್ಯಾಯಾಧೀಶ ಕಿರಣ ಪಿ.ಎಂ. ಪಾಟೀಲ, ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net