ಲಸಿಕೆಯಿಂದ ವಂಚಿತವಾಗದಿರಲಿ ಮಗು

LASIKE
Published on

ನವಲಗುಂದ: ಕೋವಿಡ್ ನಂತರ ಅನೇಕ ಮಕ್ಕಳು ಹಾಗೂ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಿರುತ್ತಾರೆ. ಆ ಕಾರಣದಿಂದ ಭಾರತ ಸರ್ಕಾರವು ದೇಶದ ಪ್ರತಿಯೊಬ್ಬ ಗರ್ಭಿಣಿ, ಮಗು ಲಸಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 5.0 ಇಂದ್ರಧನುಷ್ ಎಂಬ ಲಸಿಕಾ ಕಾರ್ಯಕ್ರಮ ಜರುಗುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಮಂಜುನಾಥ ಸೊಪ್ಪಿಮಠ ಹೇಳಿದರು. ಪಟ್ಟಣದ ಗ್ರಾಮ ಚಾವಡಿಯಲ್ಲಿ ಸೋಮವಾರ ಆಯೋಜಿಸಿದ್ದ ಇಂದ್ರಧನುಷ್ 5.0 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೀರೋದಿಂದ ಎರಡು ವರ್ಷದ ಮಕ್ಕಳು ಹಾಗೂ ಗರ್ಭಿಣಿಯರು ಲಸಿಕಾ ವಂಚಿತರಾಗದೆ ಸೋಮವಾರದಿಂದ ಐದು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪುರಸಭೆ ಸದಸ್ಯರಾದ ಜೀವನ ಪವಾರ, ಹುಸೇನಬಿ ಧಾರವಾಡ, ಪುರಸಭೆ ಅಧಿಕಾರಿ ಎ.ಕೆ. ಜೋಶಿ, ಆರೋಗ್ಯ ಇಲಾಖೆಯ ಎಂ. ಆರ್. ಕುಲಕರ್ಣಿ, ಸುಭಾಸ ಮಂಗಳಿ, ಶರಪ್ಪ ಕಡ್ಲಿಬಿತ್ತಿ, ಶೋಭಾ ಕುಲಕರ್ಣಿ, ರೇಣುಕಾ ಮುಳಗುಂದ, ಶೋಭಾ ಪತ್ತಾರ, ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net