ಆರೋಗ್ಯದೆಡೆ ಬೇಡ ಉದಾಸೀನ

CTD 11 MHILA DINACHARENE-06
Published on

ಚಿತ್ರದುರ್ಗ: ಆರೋಗ್ಯದ ಕಡೆ ಉದಾಸೀನ ಮಾಡದೆ ಸದಾ ಗಮನವಿಡಬೇಕು ಎಂದು ಡಾ.ಸುಧಾ ಮಹಿಳೆಯರಿಗೆ ಸಲಹೆ ನೀಡಿದರು.

ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮನೆ ಕೆಲಸ-ವೃತ್ತಿ ನಡುವೆ ಆರೋಗ್ಯ ಕಾಪಾಡಿಕೊಳ್ಳ ಬೇಕು. ಆಹಾರದಲ್ಲಿ ಮೈದಾ, ಸಕ್ಕರೆ, ಉಪ್ಪು, ಪಾಲಿಶ್ ಮಾಡಿದ ಅಕ್ಕಿ, ಗೋಧಿ, ಹಾಲನ್ನು ಆದಷ್ಟು ಕಡಿಮೆ ಬಳಸಬೇಕು. ತರಕಾರಿ, ಸೊಪ್ಪು, ರಾಗಿ, ಜೋಳದ ಉಪಯೋಗ ಹೆಚ್ಚಾಗಿರಲಿ. ನಿತ್ಯ ಅರ್ಧ ತಾಸು ವ್ಯಾಯಾಮ, ಯೋಗ ಮಾಡಬೇಕು ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ರೀನಾ ವೀರಭದ್ರಪ್ಪ ಹಾಗೂ ಜ್ಯೋತಿ ಲಕ್ಷ್ಮಣ್ ಮಾತನಾಡಿದರು.

ಘಟಕದ ಅಧ್ಯಕ್ಷೆ ನಿರ್ಮಲಾ ಬಸವರಾಜ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಾಲಾ ನಾಗರಾಜ್, ಕಾರ್ಯದರ್ಶಿ ನಂದಿನಿ ಸುಹಾಸ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅನಂತ್, ಕಾರ್ಯದರ್ಶಿ ಲಕ್ಷ್ಮೀ ರಮಾಕಾಂತ, ಅಕ್ಕನ ಬಳಗದ ಅಧ್ಯಕ್ಷೆ ಪುಷ್ಪಾ ವೀರಭದ್ರ ಸ್ವಾಮಿ, ಕಾರ‌್ಯದರ್ಶಿ ಇಂದಿರಾ ಜಯದೇವಮೂರ್ತಿ, ಇನ್ನರ್‌ವ್ಹೀಲ್‌ಕ್ಲಬ್ ಚಿತ್ರದುರ್ಗ ಪೋರ್ಟ್ ಅಧ್ಯಕ್ಷೆ ವರಲಕ್ಷ್ಮೀ ರತ್ನಾಕರ್, ಕಾರ‌್ಯದರ್ಶಿ ಪ್ರತಿಭಾ ವಿಶ್ವನಾಥ್ ಇತರರು ಇದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಮಹಿಳಾ ಘಟಕ, ನಗರದ ಅಕ್ಕನ ಬಳಗ,ವಾಸವಿ ಮಹಿಳಾಸಂಘ,ಇನ್ನರ್‌ವ್ಹೀಲ್‌ಕ್ಲಬ್ ಹಾಗೂ ಇನ್ನರ್‌ವ್ಹೀಲ್‌ಕ್ಲಬ್ ಪೋರ್ಟ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎಸ್‌ಜೆಎಂ ಡೆಂಟಲ್ ಕಾಲೇಜಿನಲ್ಲಿ ಈಚೆಗೆ ಮಹಿಳಾ ದಿನಾಚರಣೆ

ಚಿತ್ರದುರ್ಗ ಎಸ್‌ಜೆಎಂ ಡೆಂಟಲ್ ಕಾಲೇಜಿನಲ್ಲಿ ಈಚೆಗೆ ಮಹಿಳಾ ದಿನಾಚರಣೆಯನ್ನು ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಸುಶೀಲಾ ಸಾಂಬಶಿವಯ್ಯ ಉದ್ಘಾಟಿಸಿದರು. ಶೈಲಾ ಜಯಕುಮಾರ್, ಪ್ರಾಂಶುಪಾಲೆ ಡಾ.ಆರ್.ಗೌರಮ್ಮ, ಡಾ.ನಾಗರಾಜಪ್ಪ, ಡಾ.ಆರ್.ದೀಪಾ, ಡಾ.ಫ್ರಾಂಕ್ ಬ್ರಿಟ್ಟೊ, ಡಾ.ಮಧುಮತಿ ಪಾಟೀಲ್, ಡಾ.ಮಹಾಂತೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net