ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಆಳವಡಿಸದಿರಿ, ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ಪಟ್ಟು

J.11 dhl Raitha Sangha news- ph-1.A
Published on

ದೇವನಹಳ್ಳಿ: ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸದಿರಿ ಎಂದು ರೈತ ಸಂಘದ ಅಧ್ಯಕ್ಷ ಅರಳಾಪುರ ಸರ್ಕಾರವನ್ನು ಆಗ್ರಹಿಸಿದರು.

ಪ್ರವಾಸಿಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮಾಂತರ ಜಿಲ್ಲಾ ಶಾಖೆ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ರೈತರ ಒಂದು ದಿನದ ಅರಿವು ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.

ರೈತರ ಜಮೀನುಗಳಲ್ಲಿನ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಮೂಲಕ ರೈತರಿಂದ 18 ಸಾವಿರ ಶುಲ್ಕ ವಸೂಲಿ ಮಾಡಲು ಹುನ್ನಾರ ನಡೆಸಿದೆ. ಯಾವುದೇ ಕಾರಣಕ್ಕೂ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅಳವಡಿಸಲು ಬಿಡುವುದಿಲ್ಲ ಹಾಗೂ ಶುಲ್ಕ ಪಾವತಿಸುವುದಿಲ್ಲ ಎಂದರು.

ಪಂಪ್‌ಸೆಟ್‌ಗಳಿಗೆ ಬಲವಂತದ ಮೀಟರ್ ಅಳವಡಿಸಲು ಹೊರಟರೇ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ರೈತರಿಗೆ ವಿದ್ಯುತ್ ಸರಬರಾಜು ನಿಲ್ಲಿಸಿದರೆ ಮಹಾನಗರ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಿಗೆ ವಿದ್ಯುತ್ ಪ್ರಸರಣ ತಡೆದು ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಸೀರು ಸೇನೆ ಅಧ್ಯಕ್ಷ ರಾಜುಗೌಡ ಮಾತನಾಡಿ, ಸರ್ಕಾರದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಕಂಪನಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಜ. 26 ರಂದು ಟ್ರ್ಯಾಕ್ಟರ್ ಚಳವಳಿ ಹಮ್ಮಿಕೊಂಡಿದ್ದಾರೆ. ಇದನ್ನು ಬೆಂಬಲಿಸಿ ನಮ್ಮ ಅಧ್ಯಕ್ಷರ ಸಾರಥ್ಯದಲ್ಲಿ ಜ.22 ರಂದು ದೆಹಲಿ ಚಲೋ ಹೊರಟು ಆ ಚಳವಳಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು.

ರೈತ ಸಂಜೀವಿನಿ ಘಟಕದ ತಜ್ಞೆ ಡಾ.ನಂದಿನಿ ಮಾತನಾಡಿ, ರೈತರಿಗೆ ಮೊದಲು ಭೂಮಿ ಮತ್ತು ನೀರು ಮೂಲ ಬಂಡವಾಳ ಎನಿಸಲಿದೆ. ನಂತರ ಆ ಭೂಮಿಯ ಫಲವತ್ತತೆ ಮಣ್ಣಿನಪರೀಕ್ಷೆ ಮಾಡಿಸಿ ತಜ್ಞರ ಸಲಹೆ ಪಡೆದು ಉತ್ತಮ ಬಿತ್ತನೆ ಬೀಜ ಹಾಗೂ ಗೊಬ್ಬರ ಬಳಸಿ ಬೆಳೆ ಬೆಳೆದರೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದು ಎಂದರು.

ರೈತ ಮುಖಂಡ ಉದಯ್ ಶೆಟ್ಟಿ, ಗೌರವಾಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷ ರವಿಕುಮಾರ್, ಪ್ರಧಾನಕಾರ್ಯದರ್ಶಿ ಕಡತನಮಲೆ ನಂಜುಂಡಪ್ಪ, ತಾಲೂಕು ಅಧ್ಯಕ್ಷ ಜಯಶಂಕರ್, ಸಂಘಟನಾ ಕಾರ್ಯದರ್ಶಿ ಬಿ.ನಾಗರಾಜ್, ತಾಲೂಕು ಕಾರ್ಯಾಧ್ಯಕ್ಷ ಪೋಲನಹಳ್ಳಿ ನಾಗರಜ್, ಉಪಾಧ್ಯಕ್ಷ ಗಯಾಜ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಚೈತ್ರಾ ನಾಗರಾಜ್, ಹಾಸನ ಜಿಲ್ಲೆಯ ರೈತ ನಾಯಕಿತಾಯಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net