ಮರ ಕತ್ತರಿಸಲು ಅನುಮತಿ ನೀಡದಿರಿ

12 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಳಗಳ ಮಾರಣಹೋಮ ಹೆಚ್ಚುತ್ತಿದೆ. ಹೀಗಾಗಿ ರಸ್ತೆ ಅಭಿವೃದ್ಧಿ ಸೇರಿ ಇತರ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡಬಾರದು ಎಂದು ಹು&ಧಾ ನಾಗರಿಕ ಪರಿಸರ ಸಮಿತಿ ವತಿಯಿಂದ ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಡಿ. ಕವರಿ ಅವರಿಗೆ ಇತ್ತೀಚೆಗೆ ಮನವಿಪತ್ರ ಸಲ್ಲಿಸಲಾಗಿದೆ.
ನಗರದ ಟೋಲ್​ ನಾಕಾದಿಂದ ನುಗ್ಗಿಕೇರಿವರೆಗೆ ಅನೇಕ ಗಿಡಗಳನ್ನು ತೆಗೆಯಲು ನಿರ್ಣಯಿಸಲಾಗಿದೆ ಎಂಬ ಮಾಹಿತಿ ಇದೆ. ಅಲ್ಲದೆ ಈ ವರ್ಷ ಎಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದರ ಪಕ್ಕದಲ್ಲಿ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಗಿಡಗಳನ್ನು ನೆಡುವ ಕಾರ್ಯ ಆಗಬೇಕು. ನಗರ ಪ್ರದೇಶದಲ್ಲಿ ಅರಣ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಗಳಿಂದ ನಿರಂತರವಾಗಿ ಗಿಡಗಳ ಮಾರಣ ಹೋಮ ನಡೆಯುತ್ತಿದೆ. ಇದರ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬಂದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಟೊಂಗೆ ಕಡೆಯಲು ಪರವಾನಿಗೆ ಇದ್ದರೆ ಇಡಿ ಮರ ತಗೆಯುತ್ತಾರೆ. ಮರ ಕಡಿಯಲು ಅನವಶ್ಯಕ ಪರವಾನಗಿ ಕೊಡಬೇಡಿ. ತೀರಾ ಅವಶ್ಯಕತೆ ಇದ್ದರೆ ಜೀವಕ್ಕೆ ಅಪಾಯ ಆಗುವುದಿದ್ದರೆ ಮಾತ್ರ ಟೊಂಗೆಗಳನ್ನು ತಗೆಯಲು ಅನುಮತಿ ನೀಡಬಹುದು. ಈಗ ಇದ್ದ ಗಿಡಗಳನ್ನು ಕಡೆಯದೆ ಅವುಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹು&ಧಾ ನಾಗರಿಕ ಪರಿಸರ ಸಮಿತಿ ಅಧ್ಯ ಶಂಕರ ಕುಂಬಿ, ಸದಸ್ಯರಾದ ಡಾ. ವಿಲಾಸ ಕುಲಕಣಿರ್, ಐ.ಎಲ್​. ಪಾಟೀಲ. ಎಸ್​.ಎನ್​. ಕುಲಕಣಿರ್, ಕೆ.ಎಸ್​. ಪಾಟೀಲ, ಡಾ. ಮಲ್ಲಿಕಾರ್ಜುನ ತರ್ಲಟ್ಟ. ಡಾ. ಜಗದೀಶ ಗುಡಗೂರ. ಶ್ರೀನಿವಾಸ ಕುಲಕಣಿರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net