ಉತ್ತಮ ಕೆಲಸ ಮಾಡಿ ಜನರಿಗೆ ಹತ್ತಿರವಾಗಿ

kls1 (4)
Published on

ಕಳಸ: ಕಳಸ ಕರ್ನಾಟಕ ಬ್ಯಾಂಕ್‌ನಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿ ಕಮ್ಮರಡಿ ಶಾಖೆಗೆ ವರ್ಗಾವಣೆಗೊಂಡ ರಾಜರಾಮ್ ಅವರನ್ನು ಡಾ.ರಾಜ್ ಕನ್ನಡ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದಿಂದ ಬಿಳ್ಕೊಡಲಾಯಿತು. ಕಳಸ ಶಾಖೆಯಲ್ಲಿ ಅಧಿಕಾರಿಯಾಗಿದ್ದಾಗ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಇವರ ಉತ್ತಮ ಸೇವೆ ಗಮನಿಸಿ ಇತ್ತೀಚೆಗೆ ಕಳಸದಲ್ಲಿ ನಡೆದ ಪಂಚ ಕಲ್ಯಾಣ ಸಂದರ್ಭದಲ್ಲಿ ಗೌರವಿಸಲಾಗಿತ್ತು.

ಸನ್ಮಾನ ಸ್ವೀಕರಿಸಿ ರಾಜರಾಮ್ ಮಾತನಾಡಿ, ಹುಟ್ಟುವಾಗಲೂ ಕಾಲಿ ಕೈಯಲ್ಲಿ ಬಂದಿದ್ದೇವೆ, ಸಾಯುವಾಗಲೂ ಕಾಲಿ ಕೈಯಲ್ಲಿ ಹೋಗುತ್ತೇವೆ ಮಧ್ಯೆ ಮೂರು ದಿನದ ಬದುಕಲ್ಲಿ ಉತ್ತಮ ಕೆಲಸ ಮಾಡಿ ಜನರಿಗೆ ಹತ್ತಿರವಾದರೆ ಮಾತ್ರ ಅದು ಜೀವಂತವಾಗಿರುತ್ತವೆ ಎಂದರು.

ಕರವೇ ಗೌರವಾಧ್ಯಕ್ಷ ಶರ್ೀ ಮಾತನಾಡಿ, ಇಂತಹ ಬ್ಯಾಂಕ್ ಉದ್ಯೋಗಿಗಳು ಸಿಗುವುದು ಬಹಳ ಅಪರೂಪ. ಕಳಸ ಕರ್ನಾಟಕ ಬ್ಯಾಂಕ್‌ನ ಪ್ರತಿಯೊಬ್ಬ ಗ್ರಾಹಕರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು.

ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕರವೇ ಅಧ್ಯಕ್ಷ ಚೌಡ ನಾಯ್ಕ, ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಬ್ಯಾಂಕ್ ಉದ್ಯೋಗಿ ಪ್ರದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net