

ಕುಡಚಿ: ಮನುಷ್ಯ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡು ಧರ್ಮ ಕಾರ್ಯಗಳ ಮೂಲಕ ಪುಣ್ಯ ಸಂಪಾದಿಸಿಕೊಳ್ಳಬೇಕು ಎಂದು ಪರಮಾನಂದವಾಡಿ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಅನುಭವ ಮಂಟಪದಲ್ಲಿ ಭಾನುವಾರ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಜಗದ್ಗುರು ಸಿದಾಟಛಿರೂಢ ಸ್ವಾಮೀಜಿ ಪುರಾಣ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಕ್ತಿ ಮಾರ್ಗದಲ್ಲಿ ಸಾಗಿ ಗುರುಕೃಪೆ ಪಡೆದುಕೊಳ್ಳಬೇಕು ಎಂದರು.
ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಪ್ರವಚನ ಹೇಳಿದರು. ಜೋಡಕುರಳಿ ಸಿದಾಟಛಿರೂಢಾಶ್ರಮದ ಚಿದ್ಘನಾನಂದ ಸ್ವಾಮೀಜಿ ಮಾತನಾಡಿ, ಮಹಾತ್ಮರ ಚರಿತ್ರೆ ಓದಿದರೆ ಜ್ಞಾನ ಲಭಿಸುತ್ತದೆ ಎಂದರು.
2024&25ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಸಾಧಕರು, ದಾಸೋಹ ದಾನಿಗಳನ್ನು ಸತ್ಕರಿಸಲಾಯಿತು. ಮಹಾಲಿಂಗಯ್ಯ ಹಿರೇಮಠ ಸ್ವಾಮೀಜಿ, ಲಟ್ಟಿ ತೇಲಿ, ಗಜಾನನ ಕಾಗೆ, ವೀರೇಶ ರಾಜಮಾನೆ, ಮಹೇಶ ಪಟ್ಟಣಶೆಟ್ಟಿ, ಸಂಜೀವ ಪುಲಾರೆ, ಮೋಹನ ಬುಸುಗುಂಡೆ, ಸಾತಪ್ಪ ಪೂಲಾರೆ, ಅಶೋಕ ಖೋತ್,