

ಕಲಘಟಗಿ: ಗಣೇಶ ಹಬ್ಬ ಶಾಂತಿಯುತವಾಗಿ ಆಚರಣೆಯೊಂದಿಗೆ ಸರ್ಕಾರಿ ನಿಯಮವನ್ನ ಕಟ್ಟು ನಿಟ್ಟಾಗಿ ಪಾಲನೆ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಸಿಪಿಐ ಶ್ರೀಶೈಲ ಕೌಜಲಗಿ ಸೂಚನೆ ನೀಡಿದರು.
ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು ಮತ್ತು ಗಣೇಶ ಪ್ರತಿಷ್ಠಾಪನೆ ಸುತ್ತಲೂ ಸಂಘಟಕರು ಸಿಸಿ ಕ್ಯಾಮರಾ ಅಳವಡಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಧ್ವನಿ ವರ್ಧಕ ಬಳಕೆ ಮಾಡಬೇಕು. ಪರಿಸರಕ್ಕೆ ಮಾರಕವಾಗುವ ಪಿಒಪಿ ಗಣೇಶನಿಗೆ ಅವಕಾಶವಿಲ್ಲ ಎಂದರು.
ಗಣೇಶ ಮೂರ್ತಿಯನ್ನು ರಾತ್ರಿ 9ಗಂಟೆ ಒಳಗಾಗಿ ವಿಸರ್ಜನೆ ಮಾಡುವದು ಕಡ್ಡಾಯವಾಗಿದೆ ಸಮಯ ಮೀರಿದರೆ ಪೊಲೀಸರೆ ಪೂಜೆ ಪುನಸ್ಕಾರ ಸಲ್ಲಿಸಿ ವಿಸರ್ಜನೆ ಮಾಡುತ್ತಾರೆ ಎಂದರು.
ತಾಲೂಕು ಪಂಚಾಯತಿ ಇಓ ಪಿ.ವೈ. ಸಾವಂತ ಮಾತನಾಡಿ ಮಾತನಾಡಿದರು.
ಶರಣಪ್ಪ ಉಣಕಲ್ಲ, ವೃಷಭೇಂದ್ರ ಪಟ್ಟಣಶೆಟ್ಟಿ, ಬಸವರಾಜ ಕಡ್ಲಾಸ್ಕರ, ಪರಶುರಾಮ ಹುಲಿಹೊಂಡ, ವಾಸು ಲಮಾಣಿ, ಶಶಿಧರ ಕಟ್ಟಿಮನಿ ಹಾಗೂ ತಾಲೂಕಿನ ವಿವಿಧ ಗಜಾನನ ಯುವಕ ಮಂಡಳ ಸದಸ್ಯರು ಇದ್ದರು.