ದೇಶ ಕಟ್ಟುವ ಕೆಲಸ ಮಾಡಿ: ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

12 HRS 01SRI NIRMALANANDANATHA SWAMIJI
Published on


ಮೈಸೂರು:
ಒಕ್ಕಲಿಗ ಸಮುದಾಯ ದೇಶ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜತೆಗೆ ಸಮುದಾಯದ ಜನ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೂಚ್ಯವಾಗಿ ಹೇಳಿದರು.
ಉದ್ಯಮಿ ಒಕ್ಕಲಿಗ ಸಂಸ್ಥೆ ಆಶ್ರಯದಲ್ಲಿ ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪ್ರತಿನಿಧಿಗಳು ಹಾಗೂ ಹೂಡಿಕೆದಾರರ ವಾರ್ಷಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ನಮಗೆ ಭದ್ರತೆ ಮತ್ತು ಸುರಕ್ಷತೆ ಕೊಟ್ಟಿರುವುದು ಈ ದೇಶ. ಆದ್ದರಿಂದ ನಮ್ಮ ಸಮುದಾಯ ದೇಶ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಇಂದು ಶೇ.99 ಜನ ಅವರ ಕುಟುಂಬದ ನಾಲ್ಕು ಜನರಿಗಾಗಿ ಬದುಕಿದ್ದಾರೆ. ಆದರೆ, ನಾವೆಲ್ಲರೂ ಒಟ್ಟಿಗೆ ಬದುಕಬೇಕು, ನಾವು, ನಮ್ಮವರು ಒಂದಾಗಬೇಕು ಎಂಬ ಕಲ್ಪನೆ ಅವರಿಗೆ ಬರಬೇಕು. ಇಡೀ ಜಗತ್ತನ್ನು ಬಹಳ ವರ್ಷಗಳ ಕಾಲ ಆಳಿದವರು ಯಹೂದಿಗಳು. ಆದರೆ, ಅವರು ಕೇವಲ ಶೇ.2ರಷ್ಟು ಇದ್ದಾರೆ. ಜಗತ್ತು ಬದಲಾಗುವ ಈ ಕಾಲಘಟ್ಟದಲ್ಲಿ ಸಮುದಾಯ ಆರ್ಥಿಕವಾಗಿ ಸಬಲರಾಗಬೇಕು. ಇದು ಸಮುದಾಯದ ಅಸ್ಮಿತೆ ಕೂಡ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net