ಸಂಭ್ರಮದ ಜ್ಞಾನೇಶ್ವರಿ ಪಾರಾಯಣ

Dnaneshwari parayana of celebration
ತೇರದಾಳ ವಿಠೋಬಾ ದೇವಸ್ಥಾನದಲ್ಲಿ ನಾಮದೇವ ಶಿಂಪಿ ಮಹಿಳಾ ಸಂಘದ ಆಶ್ರಯದಲ್ಲಿ ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮ ನಡೆಯಿತು.
Published on

ತೇರದಾಳ: ಪಟ್ಟಣದ ದ್ವಾರ ಬಾಗಿಲ ಬಳಿಯ ವಿಠೋಬಾ ದೇವಸ್ಥಾನದಲ್ಲಿ ನಾಮದೇವ ಶಿಂಪಿ ಮಹಿಳಾ ಸಂಘದ ಆಶ್ರಯದಲ್ಲಿ ವಿಠೋಬಾ ಆರಾಧಕರಿಂದ(ವಾರಕರಿ ಸಂಪ್ರದಾಯ) ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಅಂದಾಜು ಮೂರು ಗಂಟೆಗೂ ಅಧಿಕ ಕಾಲ 1 ಮತ್ತು 18ನೇ ಅಧ್ಯಾಯ ಪಠಿಸಿದರು.

ಗುರುಗಳಾದ ಕೃಷ್ಣಾ ಹಾಡಕಾರ ಧರ್ಮಗ್ರಂಥ ಪಠಿಸಿ ಮಾತನಾಡಿ, ಧರ್ಮ ಗ್ರಂಥದ ಬಗ್ಗೆ ವಿಠೋಭಾ ಆರಾಧಕರಿಗೆ ಗೊತ್ತಿರಬೇಕು. ಆ ನಿಟ್ಟಿನಲ್ಲಿ ಮೊದಲ ಹಂತವಾಗಿ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಏಳು ದಿನದ ಪಾರಾಯಣ ಕಾರ್ಯಕ್ರಮ ನಡೆಯಲಿದೆ.

ಧರ್ಮ ಗ್ರಂಥ ಓದುವುದರಿಂದ ಮನುಷ್ಯನ ನಿಜವಾದ ಕರ್ತವ್ಯ ಹಾಗೂ ಬದುಕಿನಲ್ಲಿ ನೆಮ್ಮದಿ ಕಾಣಬಹುದಾಗಿದೆ ಎಂದರು.

ಪ್ರೇಮಾ ರೇನಕೆ, ರಾಧಿಕಾ ಬುಲಬುಲೆ, ಸುಮನ್ ರೇನಕೆ, ರೇಖಾ ಬುಲಬುಲೆ, ಸುಜಾತಾ ಪುಕಾಳೆ, ಭಾರತಿ ಪೋರೆ, ಅಶ್ವಿನಿ ಪತಂಗೆ, ಗಂಗಾ ರೇನಕೆ, ಅನುರಾಧಾ ಬುಲಬುಲೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net