

ಬೈಲಹೊಂಗಲ: ತಾಲೂಕಿನ ದೇವಲಾಪುರ ಗ್ರಾಮದ ಕುಲಭೂಷಣ ನಗರದಲ್ಲಿರುವ ಶ್ರೀ ಅಷ್ಟಮ ನಂದೀಶ್ವರ ಅತಿಶಯ ಕ್ಷೇತ್ರದಲ್ಲಿ ಪ.ಪೂ.ಸಮಾಧಿ ಸಾಮ್ರಾಟ ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ ನಿಷಿಧಿ ಮಂಟಪದ ನೀಲಿನಕ್ಷೆ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ಜರುಗಿತು.
ಮಾಜಿ ಸಚಿವ ಶಿವಾನಂದ ಕೌಜಲಗಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, 108 ಜ್ಞಾನೇಶ್ವರ ಮುನಿ ಮಹಾರಾಜರು ಈ ಭಾಗದಲ್ಲಿ ಬಡ ಮಕ್ಕಳ ಶಿಕ್ಷಣ ಹಾಗೂ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅವರು ಬೆಳೆಸಿದ ಸಂಸ್ಥೆ ಇಂದು ಮಕ್ಕಳ ಜ್ಞಾನಾರ್ಜನೆಗೆ ಬೆಳಕಾಗಿದೆ. ಅವರ ತತ್ತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಪ.ಪೂ ಆಚಾರ್ಯ ಶ್ರೀ 108 ವಿಮಲೇಶ್ವರ ಮುನಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಅಮೃತ ಕುಡಚಿ, ಭರಮಗೌಡ ಪಾಟೀಲ, ಸಂತೋಷ ಬೆಳಗಾವಿ, ಪದ್ಮರಾಜ ಇಂಚಲ, ಜಿನ್ನಪ್ಪ ಮಲ್ಲಾಡಿ, ಸಂತೋಷ ನಾಗನೂರ, ಅನಿಲ ಲಗಮನ್ನವರ, ವಿಜಯ ಬೆಳಗಾವಿ, ಶಾಂತಿನಾಥ ಚೌಗಲಾ, ಅನಂತ ಮರೆನ್ನವರ, ಅಶೋಕ ಬೆಳಗಾವಿ, ಮಾಣಿಕ ಬೆಳಗಾವಿ, ಅನಿಲ ಮ್ಯಾಕಲಮರ್ಡಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.