ಅಧ್ಯಕ್ಷರಾಗಿ ಡಿ.ಎಲ್.ಮಹದೇವಪ್ಪ ಆಯ್ಕೆ

8TNP2
ತಿ.ನರಸೀಪುರ ತಾಲೂಕಿನ ಡಣಾಯಕನಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಡಿ.ಎಲ್.ಮಹದೇವಪ್ಪ, ಉಪಾಧ್ಯಕ್ಷರಾಗಿ ಶಿವರುದ್ರಮ್ಮ ಅವಿರೋಧವಾಗಿ ಆಯ್ಕೆಯಾದರು. ಮಲ್ಲಣ್ಣ, ರಾಜಬುದ್ದಿ, ವಸಂತ, ಬಿಲಿಗೆರೆಹುಂಡಿ ಬಸವರಾಜು, ಮಹೇಶ್, ಸುರೇಶ್, ನಂಜಪ್ಪ, ಗಿರೀಶ್ ಮತ್ತಿತರರಿದ್ದರು.
Published on

ತಿ.ನರಸೀಪುರ: ತಾಲೂಕಿನ ಡಣಾಯಕನಪುರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಲ್.ಮಹದೇವಪ್ಪ, ಉಪಾಧ್ಯಕ್ಷರಾಗಿ ಶಿವರುದ್ರಮ್ಮ ಆಯ್ಕೆಯಾಗಿದ್ದಾರೆ.

ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಸವಿತಾ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಸಂಘದ ನಿರ್ದೇಶಕರಾದ ಸಿದ್ದಪ್ಪ, ಚಿನ್ನಬುದ್ದಿ, ನೀಲಕಂಠಸ್ವಾಮಿ, ನಂಜುಂಡಸ್ವಾಮಿ, ನಾಗರಾಜು, ನಾಗಮ್ಮ, ಸುಶೀಲಾ, ಲಕ್ಷ್ಮಮ್ಮ, ಸರೋಜಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಣಾಯಕನಪುರ ಮಲ್ಲಣ್ಣ, ಬಿಜೆಪಿ ಮುಖಂಡ ರಾಜಬುದ್ದಿ, ಗ್ರಾಪಂ ಸದಸ್ಯ ವಸಂತ, ಬಿಲಿಗೆರೆಹುಂಡಿ ಬಸವರಾಜು, ಮಹೇಶ್, ಡಣಾಯಕನಪುರ ಸುರೇಶ್, ನಂಜಪ್ಪ, ಸಂಘದ ಕಾರ್ಯದರ್ಶಿ ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net