

ಮೂಲ್ಕಿ: ಜನರ ಒಲವು ಕಾಂಗ್ರೆಸ್ ಪಕ್ಷದ ಕಡೆಗಿರುವ ಹಿನ್ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮೊದಲು ಗ್ರಾಮೀಣ ಮತದಾರರಿಗೆ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ತತ್ವ ತಿಳಿಸಿ ಗೆಲುವು ಸಾಧಿಸಲು ತಯಾರಿ ನಡೆಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ಬೆಳಗ್ಗೆ ಹಳೆಯಂಗಡಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದರು.
ಬಳಿಕ ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ಉಭಯ ಕುಶಲೋಪರಿ ವಿಚಾರಿಸಿದರು. ನನ್ನ ಸಮಾಜ ಸೇವೆಯೂ ಸಹಕಾರಿ ಸಂಘದ ಮೂಲಕವೇ ಆರಂಭಗೊಂಡು ಈ ಹಂತಕ್ಕೆ ಬೆಳೆದಿದೆ. ಕೆಳವರ್ಗದ ಜನರಿಗೆ ಪ್ರಿಯದರ್ಶಿನಿ ಸೊಸೈಟಿಯಂತಹ ಸಂಘದಿಂದ ನೆರವು ಲಭ್ಯವಾಗಬೇಕು ಎಂದರು.
ಸೊಸೈಟಿ ಅಧ್ಯಕ್ಷ ಎಚ್.ವಸಂತ ಬರ್ನಾಡ್ ಸೊಸೈಟಿ ಆರಂಭದ ಹಿನ್ನೆಲೆ ಹಾಗೂ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿ, ಕೋವಿಡ್ ಸಂದರ್ಭ ಸೊಸೈಟಿ ಆರಂಭಗೊಂಡರೂ ಆರ್ಥಿಕವಾಗಿ ಮುನ್ನಡೆಯುತ್ತಿದೆ. ಮಹಿಳೆಯರಿಗೆ ಸ್ವ ಸಹಾಯ, ಕೋವಿಡ್ ವಾರಿಯರ್ಸ್‌ಗೆ ಪರೋಕ್ಷವಾಗಿ ಪ್ರೋತ್ಸಾಹ ಒದಗಿಸುತ್ತಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮೂಡುಬಿದಿರೆ ಕಾಂಗ್ರೆಸ್ ಕ್ಷೇತ್ರ ಉಸ್ತುವಾರಿ ಮಿಥುನ್ ರೈ, ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜಶೇಖರ ಕೋಟ್ಯಾನ್, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಕೆಪಿಸಿಸಿ ಕೋ ಆರ್ಡಿನೇಟರ್ ಎಚ್.ವಸಂತ ಬೆರ್ನಾರ್ಡ್, ಕೆಪಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಗುರುರಾಜ್ ಎಸ್.ಪೂಜಾರಿ, ಕಾರ್ಯದರ್ಶಿ ಪ್ರವೀಣ್‌ಕುಮಾರ್ ಬೊಳ್ಳೂರು, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮುಖಂಡರಾದ ಯೋಗೀಶ್ ಕೋಟ್ಯಾನ್ ಚಿತ್ರಾಪು, ಪ್ರತಿಭಾ ಕುಳಾಯಿ, ಧರ್ಮಾನಂದ ಶೆಟ್ಟಿಗಾರ್, ಗೌತಮ್ ಜೈನ್, ಮಂಜುನಾಥ ಕಂಬಾರ, ಬಾಲಚಂದ್ರ ಕಾಮತ್, ಮೋಹನ ಕೋಟ್ಯಾನ್, ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ಧನರಾಜ್ ಸಸಿಹಿತ್ಲು, ಅಹಮದ್ ಬಾವಾ, ಶಶಿಕಲಾ ಕರಿತೋಟ, ನಿರಂಜಲಾ, ಚಿರಂಜೀವಿ ಅಂಚನ್, ಸತೀಶ್ ಕೋಟ್ಯಾನ್, ಪುಷ್ಪರಾಜ್ ಕೊಲಕಾಡಿ, ಮಿರ್ಜಾ ಅಹಮದ್, ಸಂತೋಷ್ ಕೋಟ್ಯಾನ್, ನವೀನ್ ಪಡುಪಣಂಬೂರು ಉಪಸ್ಥಿತರಿದ್ದರು.