ಡಿಕೆಶಿ ಬಿಲಿಯರ್ಡ್ಸ್ ಪ್ಲೇಯರ್; ಮಾಜಿ ಸಚಿವ ಸುರೇಶಕುಮಾರ್ ಹೀಗೆ ಅಂದಿದ್ದೇಕೆ ?

Suresh Kumar
Suresh Kumar
Published on

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಲಿಯರ್ಡ್ಸ್ ಪ್ಲೇಯರ್. ಯಾವ ಚೆಂಡು ಹೇಗೆ ತಳ್ಳಬೇಕೆಂದು ಗೊತ್ತು. ಹಾಗೆ ತಳ್ಳಿದ ಚೆಂಡು ಏನು ಪರಿಣಾಮಬೀರುತ್ತದೆ ಎಂಬುದನ್ನೂ ಬಲ್ಲರು ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಸುರೇಶಕುಮಾರ್ ವ್ಯಾಖ್ಯಾನಿಸಿದರು.

ಬೆಂಗಳೂರು ಜಿಲ್ಲೆಗೆ ಕನಕಪುರ ತಾಲೂಕು ಮರು ಸೇರ್ಪಡೆ ಕುರಿತು ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ತುರ್ತು ಅಗತ್ಯವಿದೆ.

ರಾಮನಗರ ಜಿಲ್ಲೆ, ಕನಕಪುರ ತಾಲೂಕು ಬೆಂಗಳೂರು ಜಿಲ್ಲೆಗೆ ಮರು ಸೇರ್ಪಡೆ ಕುರಿತು ಹೇಳಿಕೆ ನೀಡಿ ಅನಗತ್ಯ ವಿವಾದ ಸೃಷ್ಟಿಸಿ, ವಿಷಯಾಂತರ ಮಾಡಲು ಪ್ರಯತ್ನಿಸಿರುವಂತಿದೆ ಎಂಬ ಶಂಕೆ ವ್ಯಕ್ತಪಡಿಸಿದರು.

ಸಚಿವ ಸಂಪುಟದ ಸಹೋದ್ಯೋಗಿ ಡಿ.ಕೆ.ಶಿವಕುಮಾರ್ ನಿಲುವು ಹಾಗೂ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳುವರು ನೋಡೋಣವೆಂದು ಎಸ್.ಸುರೇಶಕುಮಾರ್ ಕುತೂಹಲದ ಬಿಲಿಯರ್ಡ್ಸ್ ಚೆಂಡನ್ನು ಸಿಎಂ ಅಂಗಳಕ್ಕೆ ತಳ್ಳಿದರು !.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net