ಡಿಕೆಶಿ ಮತ್ತೆ ಜೈಲಿಗೆ ಹೋಗೊದು ಗ್ಯಾರಂಟಿ: ಈಶ್ವರಪ್ಪ

Eshwarappa K.S.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಇಂದಲ್ಲಾ ನಾಳೆ ಮತ್ತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜೈಲಿಗೆ ಹೋಗುವುದು ಗ್ಯಾರಂಟಿ. ಇದನ್ನು ಇವತ್ತೇ ಬರೆದಿಟ್ಟುಕೊಳ್ಳಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಆ ಪ್ರಕರಣದಿಂದ ಅವರಿನ್ನೂ ಖುಲಾಸೆ ಆಗಿಲ್ಲ. ಕೇವಲ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅಂದು ಜೈಲಿನಿಂದ ಹೊರಬಂದ ಅವರ ವೈಭವ ನೋಡಿದರೆ ಕೇಸ್‌ನಿಂದಲೇ ಖುಲಾಸೆ ಆಯಿತೇನೋ ಎಂದುಕೊಂಡಿದ್ದೆ. ಜೈಲಿಗೆ ಸಾಕಷ್ಟು ರಾಜಕಾರಣಿಗಳು ಹೋಗಿ ಬಂದಿದ್ದಾರೆ. ಆದರೆ ಅವರಷ್ಟು ವಿರೋಚಿತವಾಗಿ ಸಂಭ್ರಮಾಚರಣೆ ಮೂಲಕ ಹೊರಗೆ ಬಂದಿದ್ದು ಇವರೇ ಮೊದಲು ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಡಿಕೆಶಿ ಎಷ್ಟರ ಮಟ್ಟಿಗೆ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದರು. ಅದನ್ನು ಮನೆಯಲ್ಲೇ ಇಟ್ಟುಕೊಂಡಿದ್ದರು ಎಂಬುದು ಇಡೀ ದೇಶವೇ ನೋಡಿತ್ತು. ಅದೇ ವಿಚಾರಕ್ಕೆ ಜೈಲಿಗೂ ಹೋಗಿದ್ದರು. ಜೈಲಿನಲ್ಲಿದ್ದರೆಂದು ಹೇಳಿದ ತಕ್ಷಣ ಅವರಿಗೆ ಸಿಟ್ಟು ಬರುತ್ತದೆ. ಇದೀಗ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದ್ದು ಮತ್ತೆ ಜೈಲಿಗೆ ಹೋಗುವ ದಿನಗಳು ಸನ್ನಿಹಿತವಾಗಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net