

ಬೆಂಗಳೂರು: ರಾಜಧಾನಿಯೆಲ್ಲೆಡೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ವಿಜಯದಶಮಿ ವೇಳೆಗೆ ಚಾಲನೆ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಂಗೇರಿಯಲ್ಲಿರುವ ಕೃಷ್ಣಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಬೃಹತ್ ಪೈಪ್ಲೈನ್ ಅಳವಡಿಕೆ ಕಾಮಗಾರಿ, ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಪಂಪ್ ಸ್ಟೇಷನ್, ಟಿ.ಕೆ.ಹಳ್ಳಿಯಲ್ಲಿರುವ ಬೃಹತ್ ನೀರು ಶುದ್ಧೀಕರಣ ಘಟಕಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದರು.
ರಾಜಧಾನಿಯಲ್ಲಿನ ಮನೆ ಮನೆಗೂ ಕಾವೇರಿ ನೀರು ಹರಿಸುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿರುವ 110 ಹಳ್ಳಿಗಳಿಗೆ ಕಾವೇರಿ ನೀರು ನೀಡಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಇದಕ್ಕೆ ಎದುರಾಗಿದ್ದ ಅಡಚಣೆಗಳನ್ನು ಹಂತಹಂತವಾಗಿ ನಿವಾರಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ತೊಂದರೆ ಆಗಬಾರದೆಂಬ ಕಾರಣಕ್ಕೆ ಯೋಜನೆ ಉದ್ಘಾಟಿಸುವ ಮುನ್ನ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿದ್ದೇನೆ ಎಂದು ಹೇಳಿದರು.
ಕೊಳವೆಬಾವಿಗಳು ಬತ್ತಿಹೋದ ಪರಿಣಾಮ ಕಳೆದ ಬೇಸಿಗೆಯಲ್ಲಿ ಜನರು ನೀರಿನ ಸಮಸ್ಯೆ ಎದುರಿಸುವಂತಾಯಿತು. ಈ ವೇಳೆ ಜಲಮಂಡಳಿಯ ಎಲ್ಲ ಸಿಬ್ಬಂದಿ ಹಗಲಿರುಳು ಶ್ರಮವಹಿಸಿ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿದ್ದರು. ಇಂತಹ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಲು ಜಲಮಂಡಳಿ ಕೆಲಸ ಮಾಡುತ್ತಿದೆ. ಹಲವು ಸುಸ್ಥಿರ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ನಗರವನ್ನು ವಾಟರ್ ಸರ್ಪ್ಲಸ್ ಮಾಡುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ನಗರಕ್ಕೀಗ 1,400 ಎಂಎಲ್ಡಿ ಕಾವೇರಿ ನೀರು ಲಭ್ಯವಾಗುತ್ತಿದೆ. 5ನೇ ಹಂತದ ಯೋಜನೆಯಿಂದ 775 ಎಂಎಲ್ಡಿ ಹೆಚ್ಚುವರಿ ನೀರು ಲಭ್ಯವಾಗಲಿದೆ. ಮುಂದಿನ 10 ವರ್ಷ ರಾಜಧಾನಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದೊಂದಿಗೆ 5ನೇ ಹಂತದ ಯೋಜನೆ ರೂಪಿಸಲಾಗಿದೆ. ಪೈಪ್ಲೈನ್ ಅಳವಡಿಕೆ ವೇಳೆ ಕನಕಪುರ ಬಳಿ ತಿರುವು ಮಾಡಲು ಆಗಿದ್ದ ತೊಂದರೆಯನ್ನು ಬಗೆಹರಿಸಲಾಗಿದೆ. ಕೆಂಗೇರಿ ಸೇರಿ ಒಂದಷ್ಟು ಕಡೆಗಳಲ್ಲಿ ಜಾಗಗಳ ಒತ್ತುವರಿ, ಅರಣ್ಯ ಭೂಮಿಗಳ ತೊಂದರೆ ಸೇರಿ ಇತರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಅವರಿಗೆ ಪರಿಹಾರವಾಗಿ ಟಿಡಿಆರ್ ನೀಡಿದ್ದೇವೆ ಎಂದು ಡಿಕೆಶಿ ವಿವರಿಸಿದರು.
ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಗೆ ದೇಶದಲ್ಲೇ ಅಗ್ರಸ್ಥಾನವಿದೆ. ಒಂದೇ ಹಂತದಲ್ಲಿ 50 ಲ ಜನರಿಗೆ ನೀರು ಒದಗಿಸುವ ಬೃಹತ್ ಯೋಜನೆ ಇದಾಗಿದ್ದು, ದೇಶದ ಮೆಟ್ರೋ ಸಿಟಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ನಗರಗಳಲ್ಲೂ ಇಷ್ಟು ದೊಡ್ಡ ಯೋಜನೆ ಈವರೆಗೆ ಅನುಷ್ಠಾನಗೊಂಡಿಲ್ಲ.
ಕಾವೇರಿ 5ನೇ ಹಂತದ ಯೋಜನೆಯಲ್ಲಿ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇವುಗಳ ಸಹಾಯದಿಂದ ಸುಮಾರು 110 ಕಿ.ಮೀ. ದೂರದಿಂದ 500 ಹಾಗೂ 2,200 ಎಂಎಂ ವ್ಯಾಸದ ಬೃಹತ್ ಉಕ್ಕಿನ ಪೈಪ್ಗಳ ಮೂಲಕ ಕಾವೇರಿ ನೀರನ್ನು 450 ಮೀಟರ್ ಎತ್ತರಕ್ಕೆ ಹರಿಸಿ ನೀರು ಪೂರೈಸಲಾಗುತ್ತದೆ. ಈ ಯೋಜನೆಗೆ 1,45,000 ಮೆಗಾ ಟನ್ ಸ್ಟೀಲ್ ಪ್ಲೇಟ್ಗಳನ್ನು ಬಳಸಲಾಗಿದೆ. ಮಹತ್ವಕಾಂೆಯ ಈ ಯೋಜನೆ ಪೂರ್ಣಗೊಳಿಸಲು 2.4 ಕೋಟಿ ಮಾನವ ಗಂಟೆಗಳ ಶ್ರಮ ಬಳಕೆಯಾಗಿದೆ ಎಂದು ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ನಗರದ ಹೊರವಲಯಕ್ಕೆ ಬರುವ ಕಾವೇರಿ ನೀರು, ವಾಜರಹಳ್ಳಿ ಬಳಿ ಪೈಪ್ಲೈನ್ ವಿಭಜನೆಯಾಗಿ ಸ್ಟೀಲ್ ಟ್ರಂಕ್ ಮೇನ್ ಮೂಲಕ ನಗರದ ಗೊಟ್ಟಿಗೆರೆ, ದೊಡ್ಡಕನ್ನಹಳ್ಳಿ, ಲಿಂಗಧೀರನಹಳ್ಳಿ, ಸಿಂಗಾಪುರ, ಎಸ್ಎಂವಿ 6ನೇ ಬ್ಲಾಕ್, ಕಾಡುಗುಡಿ ಮತ್ತು ಚೊಕ್ಕನಹಳ್ಳಿ ಜಲಾಶಯಗಳಿಗೆ ನೀರು ತುಂಬುತ್ತದೆ. ಈ ಯೋಜನೆಯಿಂದ ಯಶವಂತಪುರ, ಬೆಂ. ದಣ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ನಿವಾಸಿಗಳಿಗೆ ಕಾವೇರಿ ನೀರು ಲಭ್ಯವಾಗಲಿದೆ.
2014ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಿತ್ತು. ಕಾವೇರಿ 5ನೇ ಟ್ಟವನ್ನು 2 ಹಂತಗಳಲ್ಲಿ ಜಪಾನ್ ಇಂಟರ್ನ್ಯಾಷನಲ್ ಕೋ&ಆಪರೇಟಿವ್ ಏಜೆನ್ಸಿ (ಜೈಕಾ) 4,336 ಕೋಟಿ ರೂ. ಯೋಜನಾ ವೆಚ್ಚ ಭರಿಸಿದೆ. ಜೈಕಾ ಶೇ.84 ಹಣ ಒದಗಿಸಿದ್ದು, ಉಳಿದ ಶೇ.16 ಮೊತ್ತವನ್ನು ರಾಜ್ಯಸರ್ಕಾರ ಹಾಗೂ ಜಲಮಂಡಳಿ ಭರಿಸಿದೆ. 5,550 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ. ನೀರು ಸರಬರಾಜು ಅಷ್ಟೇ ಅಲ್ಲದೆ ನಗರದ ನೈರ್ಮಲ್ಯೀಕರಣದ ಪ್ರಮುಖ ಅಂಶವಾದ ಕೊಳಚೆ ನಿರ್ವಹಣೆಗೂ ಸುಮಾರು 1,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
ಕಾವೇರಿ 5ನೇ ಹಂತದ ಯೋಜನೆಯಿಂದ 775 ಎಂಎಲ್ಡಿ ಹೆಚ್ಚುವರಿ ನೀರು ಲಭ್ಯವಾಗಲಿದೆ. ಇದು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಲಿದೆ. ಜಲ ಮಂಡಳಿಯಿಂದ ನಗರದಲ್ಲಿ ಈವರೆಗೆ 10.64 ಲ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ. ಕಾವೇರಿ 5ನೇ ಹಂತದ ಯೋಜನೆಗೆ ಜಾರಿ ಬಳಿಕ 4 ಲ ಹೊಸ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಜಲಮಂಡಳಿಯ ಆದಾಯವೂ ಹೆಚ್ಚಲಿದೆ. ಸದ್ಯ 110 ಹಳ್ಳಿಗಳಿಂದ ಸುಮಾರು 50 ಸಾವಿರ ಸಂಪರ್ಕ ನೋಂದಣಿಯಾಗಿದೆ.
ಕೆಂಗೇರಿಯಲ್ಲಿರುವ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯುತ್ತಿರುವ ಪೈಪ್ಲೈನ್ ಅಳವಡಿಕೆ ಕಾಮಗಾರಿ ವೀಣೆ ವೇಳೆ ಜಲಮಂಡಳಿ ಅಧಿಕಾರಿಯೊಬ್ಬರು 3 ದಿನಗಳಲ್ಲಿ ಪೈಪ್ ಅಳವಡಿಕೆ ಕೆಲಸ ಮುಕ್ತಾಯವಾಗುತ್ತದೆ ಎಂದರು. ಆಗ "ಕೆಲಸ ಬೇಗ ಮುಗಿಸಿ, ಆದರೆ ಅವಸರದಲ್ಲಿ ಕಾಮಗಾರಿಯ ಗುಣಮಟ್ಟ ಮರೆಯಬೇಡಿ' ಎಂದು ಡಿ.ಕೆ. ಶಿವಕುಮಾರ್ ಸೂಚಿಸಿದರು. ಕೆಂಗೇರಿ&ಉತ್ತರಹಳ್ಳಿ ರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಆವರಣದಲ್ಲಿ ಕ್ರಮವಾಗಿ ಮೂರು ಕಡೆ 120 ಮೀಟರ್ ಪೈಪ್ಲೈನ್ ಅಳವಡಿಕೆ ಬಾಕಿ ಇದೆ. ಈ ಕಾಮಗಾರಿ ಮುಗಿದರೆ ಪೈಪ್ ಅಳವಡಿಕೆ ಕಾರ್ಯ ಸಂಪೂರ್ಣವಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.
ಡಿಸಿಎಂ ಹೋದಲ್ಲೆಲ್ಲ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಸ್ಥಳಿಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕಾದು ಕುಳಿತಿದ್ದರು. ಡಿಕೆಶಿ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಕೆಲವರು ಒಂದೆರಡು ಕಡೆಗಳಲ್ಲಿ ದಾರಿ ಮಧ್ಯೆ ಕಾರು ಅಡ್ಡಗಟ್ಟಿ, ತಮ್ಮ ಅಹವಾಲುಗಳನ್ನು ತಿಳಿಸಿದರು.
ಶಾಸಕರಾದ ಎಸ್.ಟಿ. ಸೋಮಶೇಖರ್, ನರೇಂದ್ರ ಸ್ವಾಮಿ, ರವಿಕುಮಾರ್, ದಿನೇಶ್ ಗೂಳಿಗೌಡ, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ಜಲಮಂಡಳಿ ಅಧ್ಯ ಡಾ. ವಿ.ರಾಮ್ ಪ್ರಸಾತ್ ಮನೋಹರ್ ಮತ್ತಿತರ ಅಧಿಕಾರಿಗಳು ಇದ್ದರು.